ಹುಬ್ಬಳ್ಳಿ;ಸಾರ್ವಜನಿಕ ಶಾಂತಿ, ನೆಮ್ಮದಿ ಭಂಗ ಆಗದಂತೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು
ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದರು.ನಗರದಲ್ಲಿಂದು ಹುಬ್ಬಳ್ಳಿ-ಧಾರವಾಡದ ಪೊಲೀಸರಿಂದ ರೌಡಿ ಪರೇಡ್ ನಡೆಸಿ ನಂತರ ಅವರು ಮಾತನಾಡಿದರು,ಹುಬ್ಬಳ್ಳಿಯ ಹಳೆ ಸಿ ಎ ಆರ್ ಮೈದಾನದಲ್ಲಿ ನಡೀತಿರೋ ಪರೇಡ್ ಅವಳಿನಗರದ ಎಲ್ಲಾ ಪೊಲೀಸ್ ಠಾಣೆಗಳ 700ಕ್ಕೂ ಅಧಿಕ ರೌಡಿ ಗಳನ್ನ ಕರೆತಂದ ಅವಳಿನಗರ ಪೊಲೀಸರು ವಾರ್ನ ಮಾಡಲಾಗಿದ್ದು,
ವೈಲೆಂಟ್ ಆರೋಪಿಗಳ ಮೇಲೆ ರೌಡಿ ಶೀಟರ್ ಹಾಕಲಾಗುವುದು ಗಡಿಪಾರು, ಗುಂಡಾ ಆಕ್ಟ್ ಮಾಡುವ ಕೆಲಸ ಮಾಡ್ತಾ ಬಂದಿದ್ದೇವೆ ರಾಜ್ಯದಲ್ಲಿ ರೌಡಿ ಶೀಟರ್ ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆ ನಮ್ಮ ಕಮಿಷ್ನರೇಟರ್ ವ್ಯಾಪ್ತಿಯಲ್ಲಿ ರೌಡಿ ಪರೇಡ್ ಮಾಡಲಾಗುತ್ತಿದೆ. ಇಂದಿನ ಪರೇಡ್ ನಲ್ಲಿ ಒಟ್ಟು 1,700 ರೌಡಿ ಶೀಟರ್ ಗಳನ್ನ ಕರೆತರಲಾಗಿದೆ. ಪ್ರತಿ ಠಾಣೆಯಿಂದ 50-60 ರಿಂದ 200 ರ ವರೆಗೆ ರೌಡಿ ಶೀಟರ್ ಇದ್ದಾರೆ. ಮ50 ಜನರನ್ನ ಗಡಿಪಾರು ಮಾಡಲಾಗಿದ್ದು, ಆರೋಪಿಗಳ ಮೇಲೆ ರೌಡಿ ಶೀಟ್ ಇತ್ತು.
ರಾಜ್ಯದ ಬೀದರ, ಕಲ್ಬುರ್ಗಿ, ಚಾಮರಾಜನಗರ ಸೇರಿ ಹಲವೆಡೆ ಗಡಿಪಾರು ಮಾಡಿದ್ದೇವೆ. ಗಡಿಪಾರು ಮಾಡಿದ ವ್ಯಾಪ್ತಿಯಲ್ಲಿ ಇದ್ದಾನಾ ಅಂತ ಸಹ ನಾವು ಪರಿಶೀಲನೆ ಮಾಡಿದ್ದೇವೆ. ಮಾರಕಾಸ್ತ್ರ ಇಟ್ಟುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರು ಹಲವು ಕೃತ್ಯ ಮಾಡಿದವರ ಮೇಲೆ ಕ್ರಮ ಕಗೊಂಡಿದ್ದೇವೆ ಇದರ ಆಧಾರದ ಮೇಲೆ ಪರೇಡ್ ಮಾಡ್ತಾ ಇದ್ದೇವೆ
ಇವತ್ತು 980 ಜನ ರೌಡಿಗಳು ಬಂದಿದ್ದಾರೆ ಉಳಿದವರು ಅನಾರೋಗ್ಯ ಸೇರಿ ಹಲವು ಕಾರಣಗಳಿಂದ ಬಂದಿಲ್ಲ,
ಕೆಲವರು ರೌಡಿ ಶೀಟರ್ ಪರೇಡ್ ಮಾಡ್ತಾ ಇರೋ ವಿಷಯ ಕೇಳಿ ಪರಾರಿ ಆಗಿದ್ದಾರೆ ನಿನ್ನೆ ರಾತ್ರಿ 12 ಗಂಟೆಗೆಯಿಂದಲೇ ಎಲ್ಲಾ ಪ್ರೊಸೆಸ್ ಮಾಡ್ತಾ ಇದ್ದೆವು ಆರೋಪಿಗಳ ಮೊಬೈಲ್ ಗಳನ್ನು ಸಹ ವಶಕ್ಕೆ ಪಡೆದಿದ್ದೇವೆ ಇನ್ನು 2025ರಲ್ಲಿ ಹೊಸದಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರನ್ನು ಸಹ ಗಡಿಪಾರು ಹಾಗೂ ಗುಂಡಾ ಆಕ್ಟ್ ಹಾಕಲಾಗಿದೆರೌಡಿ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆ ಸಹ ಆರಂಭ ಮಾಡಿದ್ದೇವೆ ಕೆಲವರದ್ದು 2,000 ಇಸ್ವಿಯಲ್ಲಿ ಆಗಿದೆ,
65 ವರ್ಷದ ಮೇಲಿನವರನ್ನ ಸಹ ಗಣನೆಗೆ ತೆಗೆದುಕೊಂಡಿದ್ದೇವೆ 1,700 ಬಹಳ ದೊಡ್ಡ ಸಂಖ್ಯೆ, ನಮ್ಮ ಪೊಲೀಸ್ ಸಿಬ್ಬಂದಿಗಿಂತ ಹೆಚ್ಚಾಗಿದೆ. ಮುಂದಿನ ಎರಡು ತಿಂಗಳಲ್ಲಿ ಉತ್ತಮ ನಡತೆ ಇದ್ದವರನ್ನ ಕ್ಲೋಸ್ ಮಾಡಲಾಗುತ್ತೆ ಸಾಮಾಜಿಕ ಜಾಲತಾನಗಳಲ್ಲಿ ಜಾಗೃತಿ, ಮನರಂಜನೆಗಳ ವಿಡಿಯೋ ಸಾಮಾನ್ಯ ರೌಡಿ ಶೀಟರ್ ಗಳು ಸಹ ಅಕೌಂಟ್ ಓಪನ್ ಮಾಡ್ಕೊಂಡು ಭಯ ಸೃಷ್ಟಿ ಮಾಡ್ತಾ ಇದ್ದಾರೆ. ಇಂತಹ ವಾತಾವರಣ ನಿರ್ಮಾಣ ಮಾಡಿಕೊಂಡು ಅಪರಾಧ ಮಾಡ್ತಾ ಇದ್ದಾರೆ ಅಂತಹ 13 ಜನರನ್ನ ಈಗಾಗಲೇ ಗುರುತಿಸಿದ್ದೇವೆ. ನಮ್ಮಲ್ಲಿ ಒಬ್ಬರು ಪಾಕಿಸ್ತಾನ್ ಪ್ರಜೆ ಇದ್ರು, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದರು.