ಗುವಾಹತಿ: ಪಾಪಿ ಪತಿಯೋರ್ವ ಪತ್ನಿಯ ಹತ್ಯೆಗೈದು ಆಕೆಯ ರುಂಡದ ಸಮೇತ ಪೊಲೀಸರ ಎದುರಿಗೆ ಶರಣಾಗಿರುವ ಘಟನೆ ಅಸ್ಸಾಂನ ಚಿರಾಂಗ್ನಲ್ಲಿ ವರದಿಯಾಗಿದೆ.
ಕೌಟುಂಬಿಕ ಕಲಹದಿಂದಾಗಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿದ್ದು, ಆಕೆಯ ರುಂಡವನ್ನು ಹೊತ್ತು ಸೈಕಲ್ನಲ್ಲಿ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.
ಬಿತೀಶ್ ಹಜೋಂಗ್ ಎಂಬ ವ್ಯಕ್ತಿ ತನ್ನ ಪತ್ನಿ ಬಜಂತಿ ಎಂಬಾಕೆಯನ್ನು ಕೊಂದು ಬಳಿಕ ಆಕೆಯ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆಕೆಯ ತಲೆಯನ್ನು ತನ್ನ ಸೈಕಲ್ ನಲ್ಲಿ ಹೇರಿಕೊಂಡು ಬಲ್ಲಮ್ಗುರಿ ಹೊರಠಾಣೆ ತಲುಪಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಜಂತಿಯನ್ನು ತನಿಖೆ ನಡೆಸುತ್ತಿದ್ದಾರೆ.