ಶತ್ರುರಾಷ್ಟ್ರ ಪಾಕಿಸ್ತಾನವನ್ನು ಭಾರತ ಪತರುಗುಟ್ಟುವಂತೆ ಮಾಡಿದೆ. ಆಪರೇಷನ್ ಸಿಂಧೂರ ಸಕ್ಸಸ್ ಬೆನ್ನಲ್ಲೇ ಪಾಕ್ ಡ್ರೋನ್ ಗಳನ್ನು ಉಡೀಸ್ ಮಾಡಿ ಪಾಪಿಗಳ ನಿದ್ದೆಗೆಡಿಸಿದೆ. ಒಂದ್ಕಡೆ ಭಾರತ ಪಾಕ್ ನ್ನು ಅಲುಗಡಿಸುತ್ತಿದ್ದು, ಇತ್ತ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭಾರತದ ಮೂರು ಸೇನಾ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ರಾಜನಾಥ್ ಸಿಂಗ್ ಮಂದಹಾಸದ ನಗುಬೀರಿದ್ದಾರೆ. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜನಾಥ್ ಸಿಂಗ್ ಮಾತ್ರವಲ್ಲ ಸಭೆಯಲ್ಲಿ ಭಾಗಿಯಾಗಿದ್ದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ , ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಕೂಡ ನಗು ನಗುತ್ತಿರುವ ಫೋಟೋ ಪಾಪಿ ಪಾಕಿಸ್ತಾನ ಪೀಕಲಾಟದ ಕಥೆ ಹೇಳುವಂತಿದೆ.
ಭಾರತವನ್ನು ಎದುರಿಸಲಾಗದೇ ಪತರುಗುಟ್ಟಿರುವ ಪಾಕಿಸ್ತಾನ ಸ್ಥಿತಿಯನ್ನು ನೋಡಿ ಎಲ್ಲರೂ ನಗುತ್ತಿರುವಂತಿದೆ. ಎರಡು ಗಂಟೆಗಳ ಕಾಲ ಮೂವರು ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಸಭೆ ನಡೆಸಿದ್ದಾರೆ. ಪಾಕಿಸ್ತಾನದ ದಾಳಿಗಳನ್ನು ತಡೆಗಟ್ಟಿ ಸಮರ್ಥವಾಗಿ ಎದುರಿಸುವುದು, ಭಾರತ ಕೈಗೊಳ್ಳುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ಪಾಕಿಸ್ತಾನದೊಂದಿಗಿನ ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮಾಹಿತಿ ನೀಡಿದರು. ಅದೇ ಸಮಯದಲ್ಲಿ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ವಾಯುಪಡೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.