ಬೆಂಗಳೂರು:- ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ರಾಷ್ಟ್ರೀಯ ಭೂಮಾಪನ ದಿನಾಚರಣೆ ಸಮಾರಂಭ ಜರುಗಿದೆ.
ಬೆಂಗಳೂರಿನ ರೆವಿನ್ಯೂ ಆಸ್ತಿ ಮಾಲೀಕರಿಗೆ ಸಿಕ್ತು ರಾಜ್ಯ ಸರ್ಕಾರದ ಗುಡ್ ನ್ಯೂಸ್!
ಇದೇ ವೇಳೆ ಇಲಾಖೆಯ 2 ವರ್ಷದ ಸಾಧನೆ ಕೈಪಿಡಿಯನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಹಾಗೆಯೇ ಭೂಮಾಪನ ಇಲಾಖೆ ಸುತ್ತೋಲೆಯ ಸಂಪುಟ ಬಿಡುಗಡೆ ಮಾಡಿದರು. ಭೂ ಮಾಪಕರಿಗೆ ಆಧುನಿಕ ಸರ್ವೆ ಉಪಕರಣ ರೋವರ್ಗಳ ವಿತರಣೆ ಮಾಡಲಾಗಿದ್ದು, ಸ್ವಮಿತ್ವ ಯೋಜನೆಯಡಿ ಗ್ರಾಮೀಣ ಜನವಸತಿ ಪ್ರದೇಶದ ನಕ್ಷೆ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ ಈ ವೇಳೆ ಮಾತನಾಡಿ, 7 ವರ್ಷಗಳಿಂದ ಭೂ ಮಾಪನ ದಿನಾಚರಣೆ ಆಚರಿಸಿರಲಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದೊಡ್ಡ ಕಾರ್ಯಕ್ರಮವಾಗಿದೆ. ರೈತರ ಕೆಲಸ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
1802ರಲ್ಲಿ ಸರ್ವೇ ನಡೆದಿದೆ. ವೈಜ್ಞಾನಿಕವಾಗಿ ಸರ್ವೇ ಮಾಡಬೇಕು ಎಂದು ಹೇಳಿ ಕನ್ಯಾಕುಮಾರಿಯಿಂದ ಬೆಂಗಳೂರಿನವರೆಗೂ ಸರ್ವೇ ಮಾಡಲಾಗಿತ್ತು. ಅದೇ ರೀತಿ ಅಕ್ಕಪಕ್ಕದ ದೇಶಗಳಿಗೂ ಇದೇ ದಿನ ಸರ್ವೇ ದಿನ ಆಚರಣೆ ಮಾಡುತ್ತಾ ಬಂದಿದ್ದೇವೆ. ದಕ್ಷಿಣ ಏಷ್ಯದ ವೈಜ್ಞಾನಿಕ ಸರ್ವೇ ಆರಂಭವಾಗಿದ್ದೇ ಇದೇ ದಿನ. ಇದಕ್ಕೂ ಮುನ್ನ ಸರ್ವೇ ಆ್ಯಂಡ್ ಸೆಟಲ್ಮೆಂಟ್ ಡಿಪಾರ್ಟ್ಮೆಂಟ್ ಎಂದು ಕರೆಯುತ್ತಿದ್ದರು. ಸರ್ವೇ ಮಾಡಿದಾಗಲೇ ಜಮೀನಿಗೆ ಅಸ್ತಿತ್ವ ಬರುತ್ತದೆ. ಆಡಳಿತ ವ್ಯವಸ್ಥೆಗೆ ಅಡಿಪಾಯ ಹಾಕಿದ್ದೇ ಸರ್ವೇ ಇಲಾಖೆ ಎಂದು ತಿಳಿಸಿದರು.
ಸರ್ವೇ ವಿಧಾನ ಕೂಡ ಬದಲಾವಣೆ ಆಗಿಲ್ಲ. ನಾವು ಮಾಡುವ ಕೆಲಸ 200 ವರ್ಷ ಹಿಂದೆಯೇ ಉಳಿದಿದೆ. ಆದರೆ ಇದೀಗ ಟೆಕ್ನಾಲಜಿ ಹೆಚ್ಚಾಗಿದೆ. ಇಷ್ಟೊಂದು ಟೆಕ್ನಾಲಜಿ ಇದ್ದರೆ ಯಾಕೆ ಸಿಬ್ಬಂದಿ ಕೆಲಸ ಸರಳೀಕರಣ ಮಾಡಿಲ್ಲ ಎಂದು ಅರ್ಥವಾಯ್ತು. ಐದು ಸಾವಿರ ರೋವರ್ ಖದೀರಿಗೆ ಟೆಂಡರ್ ಆಗಿದೆ. ಸ್ಟೇಜ್ ಬೈ ಸ್ಟೇಜ್ ಖರೀದಿ ಮಾಡಲು ಹೇಳಿದ್ದಾರೆ. ಇದರಿಂದ ನೌಕರರ ಮೇಲಿನ ಹೊರೆ ಕಡಿಮೆಯಾಗುತ್ತದೆ. ಬೇಗ ಕೆಲಸ ಆಗುತ್ತದೆ. ಎಲ್ಲಾ ಮಾದರಿಯಲ್ಲಿ ಡಿಜಿಟೀಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.