Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮನಮೋಹಕವಾಗಿದೆ “ಲೇಡಿಸ್ ಬಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು..!

    By AIN AuthorDecember 6, 2023
    Share
    Facebook Twitter LinkedIn Pinterest Email
    Demo

    ಡಿ.ಎಂ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್ ನಿರ್ದೇಶಿಸಿರುವ “ಲೇಡಿಸ್ ಬಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು ರಾಜಕೀಯ ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ್ ಟೀಸರ್ ಬಿಡುಗಡೆ ಮಾಡಿದರು. ಹಾಡುಗಳನ್ನು ನಟಿ ರೂಪಿಕಾ, ಮಮತ ಹಾಗೂ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಲೋಕಾರ್ಪಣೆಯಾಗಿದೆ. ನಂತರ ಚಿತ್ರತಂಡದ ಸದಸ್ಯರು “ಲೇಡಿಸ್ ಬಾರ್” ಕುರಿತು ಮಾಹಿತಿ ನೀಡಿದರು.

    “ಲೇಡಿಸ್ ಬಾರ್” ಶೀರ್ಷಿಕೆ ಕೇಳಿದ ತಕ್ಷಣ ಕುಡಿತದ ಬಗ್ಗೆ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ನಮ್ಮ ಚಿತ್ರದಲ್ಲಿ ಬರೀ ಕುಡಿತವಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಚಿತ್ರ ನೋಡಿದಾಗ ಅದು ತಿಳಿಯುತ್ತದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ‌. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ ಎಂದು ನಿರ್ದೇಶಕ ಎ.ಎನ್ ಮುತ್ತು ತಿಳಿಸಿದರು.

    ನಾನು ಉದ್ಯಮಿ ಜೊತೆಗೆ ರೈತ ಕೂಡ ಎಂದು ಮಾತನಾಡಿದ ಟಿ.ಎಂ.ಸೋಮರಾಜು, ಸಿನಿಮಾ ರಂಗ ಪರಿಚಯವೇ ಇಲ್ಲ. ನನ್ನ ಗೆಳೆಯ ರಾಜಶೇಖರ್ ನನ್ನನ್ನು ಈ ರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. ನಿರ್ದೇಶಕ ಎ.ಎನ್ ಮುತ್ತು ಅವರು ಹೇಳಿದ ಕಥೆ ಇಷ್ಟವಾಯಿತು ನಿರ್ಮಾಣ ಮಾಡಿದ್ದೇನೆ. ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹ ನೀಡಿ ಎಂದರು.

    ಸಹ ನಿರ್ಮಾಪಕ ರಾಜಶೇಖರ್ ಚಿತ್ರ ಸಾಗಿ ಬಂದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಹರ್ಷ ಕಾಗೋಡ್, ಛಾಯಾಗ್ರಾಹಕ ವೀನಸ್ ಮೂರ್ತಿ, ಸಾಹಸ ನಿರ್ದೇಶಕ ಜಗ್ಗು ಮಾಸ್ಟರ್ ಹಾಗೂ ಚಿತ್ರದಲ್ಲಿ ನಟಿಸಿರುವ ಹರೀಶ್ ರಾಜ್, ಶಿವಾನಿ, ಮಾಧುರಿ, ಗಣೇಶ್ ರಾವ್, ಆರಾಧ್ಯ ಮುಂತಾದವರು “ಲೇಡಿಸ್ ಬಾರ್” ಬಗ್ಗೆ ಮಾತನಾಡಿದರು..ಚಿತ್ರದ ಸಿರಿ ಮ್ಯೂಸಿಕ್ ನಲ್ಲಿ ಹಾಡುಗಳನ್ನು ನೋಡಿ, ನಿಮಗನಿಸಿದನ್ನು ಕಾಮೆಂಟ್ ಮಾಡಿ. ಉತ್ತಮ ಕಾಮೆಂಟ್ ಗೆ ನಿರ್ಮಾಪಕರು ಮೊಬೈಲ್‌ ನೀಡಲಿದ್ದಾರೆ ಎಂದು ಸಿರಿ ಮ್ಯೂಸಿಕ್ ಚಿಕ್ಕಣ್ಣ ತಿಳಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಕೇಂದ್ರ ಸಚಿವರಿಗೆ ಸಂಕಷ್ಟ: ವಿವಾದದಲ್ಲಿ ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ..! ಕಾರಣವೇನು ಗೊತ್ತಾ..?

    June 24, 2025

    ಹಿಂದಿಯ ಖ್ಯಾತ ಸೀರಿಯಲ್ ಶೂಟಿಂಗ್ ಸೆಟ್ ನಲ್ಲಿ ಭೀಕರ ಬೆಂಕಿ ಅವಘಡ: ಅರ್ಧಕ್ಕೆ ನಿಲ್ಲುತ್ತಾ ಧಾರವಾಹಿ?

    June 23, 2025

    ʼಡೆವಿಲ್‌ʼ ಕ್ರೇಜಿ ಅಪ್‌ಡೇಟ್..ಯಾವಾಗ ಡಿಬಾಸ್‌ ʼದರ್ಶನʼ?

    June 23, 2025

    ವಿಜಯ್‌ ದೇವರಕೊಂಡ ವಿರುದ್ಧ FIR ದಾಖಲೆ..ಅರೆಸ್ಟ್‌ ಆಗ್ತಾರಾ ರಶ್ಮಿಕಾ ಮಂದಣ್ಣ ಸ್ನೇಹಿತ?

    June 23, 2025

    ಡಿಮ್ಯಾಂಡ್ ಕಳೆದುಕೊಂಡ್ರಾ ನ್ಯಾಷನಲ್ ಕ್ರಷ್!? ದಿಢೀರ್ ಸಂಭಾವನೆ ಕುಸಿತ?

    June 22, 2025

    ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್..’ಹರಿ ಹರ ವೀರ ಮಲ್ಲು ರಿಲೀಸ್ ಡೇಟ್‌ ಫಿಕ್ಸ್!

    June 21, 2025

    ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ!

    June 20, 2025

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025

    ಯಶ್‌ ತಾಯಿ ನಿರ್ಮಾಣದ ಮೊದಲ ಚಿತ್ರ ಬಿಡುಗಡೆಗೆ ರೆಡಿ..ʼಕೊತ್ತಲವಾಡಿʼ ದರ್ಶನ ಯಾವಾಗ?

    June 20, 2025

    ಕಿಚ್ಚ ಸುದೀಪ್‌ ಹೆಸರಲ್ಲಿ ಪಂಗನಾಮ..ಯುವನಟನಿಗೆ ನಂದಕಿಶೋರ್‌ ದೋಖಾ…?

    June 20, 2025

    ಪ್ರಚಾರ ಅಖಾಡದಲ್ಲಿ ಎಕ್ಕ…ಜುಲೈ 18ಕ್ಕೆ ಯುವರಾಜ್ ಕುಮಾರ್ ಸಿನಿಮಾ ರಿಲೀಸ್

    June 20, 2025

    ʼಕನ್ನಡ ಕೋಗಿಲೆʼ ಗಾಯಕಿ ಬಾಳಲ್ಲಿ ಡಿವೋರ್ಸ್‌ ಬಿರುಗಾಳಿ..ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಫೋಟೋಸ್ ಡಿಲೀಟ್

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.