ಕೊಪ್ಪಳ : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಹೃದಯಾಘಾತದಿಂದ ರಂಗಭೂಮಿ ಕಲಾವಿದ ಸಾವನ್ನಪ್ಪಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ. ರಂಗಭೂಮಿ ಕಲಾವಿದ ನಿಂಗನಗೌಡ (65 ) ಅವರಿಗೆ ಗ್ರಾಮದಲ್ಲಿ ಓಡಾಡುವಾಗ ಎದೆ ನೋವು ಕಾಣಿಸಿಕೊಂಡಿದೆ. ಆಗ ಕೆಲವೊತ್ತು ರಸ್ತೆ ಪಕ್ಕ ಮಲಗಿ ಸುಧಾರಿಸಿಕೊಂಡ ಬಳಿಕ ನಿಂಗನ ಗೌಡ ಮನೆಗೆ ತೆರಳಿದ್ದಾರೆ. ಆದರೆ ಆ ಬಳಿಕ ಮನೆಗೆ ಹೋಗುತ್ತಿದ್ದ ನಿಂಗನಗೌಡ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಇನ್ನೂ ಎದೆ ನೋವಿನಿಂದ ಪರದಾಡಿದ ನಿಂಗನಗೌಡ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.