ಚಿತ್ರರಂಗಕ್ಕೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಬರುವ ಹೊಸಬರ ಮೊದಲ ಹೆಜ್ಜೆಯೇ ಕಿರುಚಿತ್ರ ಇಲ್ಲ ಆಲ್ಬಂ ಸಾಂಗ್. ಇಲ್ಲಿಂದಲೇ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೊಸಬರು ವೇದಿಕೆ ರೂಪಿಸಿಕೊಳ್ಳುತ್ತಾರೆ. ಕೆಲವರಂತೂ ಚೆಂದದ ಹಾಡಿನ ಮೂಲಕ ಚಮತ್ಕಾರ ಮಾಡಿ ಮೋಡಿ ಮಾಡುತ್ತಾರೆ. ಸದ್ಯ ತೇಲುತಾ ಸಾಗಿದೆ ಅಂತಾ ಕುಣಿದು ಎಲ್ಲರನ್ನೂ ಸಂತೋಷ್ ಮಂತ್ರ ಮುಗ್ದರನ್ನಾಗಿ ಮಾಡುತ್ತಿದ್ದಾರೆ.
ಕನ್ನಡದಲ್ಲಿ ಹೊಸತಂಡವೊಂದು ಹೊಸ ಆಲ್ಬಂ ಮಾಡಿದೆ. ಅದೇ ತೆಲುತಾ ಸಾಗಿದೆ. Wallis flicks ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಗೀತೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕುತ್ತಿದೆ. ಯುವ ಪ್ರತಿಭೆ ಸಂತೋಷ್ ನಿರ್ದೇಶಿಸಿ ತಾವೇ ಕೊರಿಯೋಗ್ರಫಿ ಮಾಡಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿಂಧು ಆರ್ ಎಂಬುವವರು ಸೊಗಸಾದ ಪದ ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ಸತ್ಯ ರಾಧಾಕೃಷ್ಣನ್ ಹಾಡಿಗೆ ಟ್ಯೂನ್ ಹಾಕಿ ಧ್ವನಿಯಾಗಿದ್ದಾರೆ.
ಕೇಳಲಿಕ್ಕೆ ಸುಮಧುರ ಎನಿಸುವ, ನೋಡಲು ಹಿತವೆನಿಸುವ ʼತೇಲುತಾ ಸಾಗಿದೆʼ ಆಲ್ಬಂ ಸಾಂಗ್ ನ್ನು ಕನ್ನಡ Wallis flicks production ಸಂಸ್ಥೆ ನಿರ್ಮಿಸಿದೆ. ಒಂದೊಳ್ಳೆ ತಂಡ ಸೇರಿಕೊಂಡು ಕನ್ನಡದಕ್ಕೆ ಸೊಗಸಾದ ಆಲ್ಬಂ ಸಾಂಗ್ ಕೊಡುಗೆಯಾಗಿದೆ ನೀಡಿದೆ. ಮಾರುತಿ ಸುಂದರ ದೃಶ್ಯಗಳನ್ನು ಸೆರೆ ಹಿಡಿಯುವುದರ ಜೊತೆಗೆ ಅಚ್ಚುಕಟ್ಟಾಗಿ ಸಂಕಲನ ಮಾಡಡಿದ್ದಾರೆ.