ಬೆಂಗಳೂರು: ನಿನ್ನ ದೇಹದಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಹದಿನೈದು ಆತ್ಮಗಳಿವೆ, ಪೂಜೆ ಹಾಕಿ ನಿನ್ನ ಆರೋಗ್ಯ ಸರಿ ಹೋಗುವಂತೆ ಮಾಡ್ತೇನೆ, ನಿನಗೆ ಮದುವೆಯೂ ಆಗುತ್ತೆ ಎಂದು ಮಹಿಳಾ ಪೊಲೀಸ್ ಸಿಬ್ಬಂದಿಗೆ ಜ್ಯೋತಿಷ್ಯ ನೆಪದಲ್ಲಿ ಡೋಂಗಿ ಬಾಬಾ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಕಾನ್ಸ್ಟೇಬಲ್ವೊಬ್ಬರ ಬಳಿ ಪೂಜೆ, ಆತ್ಮದ ಕಥೆ ಕಟ್ಟಿ ವಂಚಿಸಿದ ಆರೋಪದಡಿ ಕಲಬುರಗಿ ಮೂಲದ ಹೇಮಂತ್ ಭಟ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ಕಾನ್ಸ್ಟೇಬಲ್ಗೆ ಸ್ನೇಹಿತೆಯ ಮೂಲಕ ಆರೋಪಿ ಹೇಮಂತ್ ಭಟ್ ಪರಿಚಯವಾಗಿತ್ತು. ಜಾತಕ ಪರಿಶೀಲಿಸಿದ್ದ ಆರೋಪಿಯು ನಿನ್ನ ದೇಹದಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಹದಿನೈದು ಇತರೆ ಆತ್ಮಗಳು ಸೇರಿವೆ. ಆದ್ದರಿಂದಲೇ ಸಮಸ್ಯೆಯಾಗುತ್ತಿದೆ, ಇನ್ನೂ ನಿನಗೆ ಮದುವೆ ಸಹ ಆಗುತ್ತಿಲ್ಲ. ಶಾಂತಿ ಮಾಡಿಸದಿದ್ದರೆ ಪ್ರಾಣ ಹಾನಿಯಾಗುತ್ತದೆ ಎಂದು ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬಳಿಕ ಖಾಸಗಿ ಕೋರಮಂಗಲದ ಹೋಟೆಲ್ವೊಂದರಲ್ಲಿ ಪೂಜೆ ಮಾಡಿದ್ದ ಆರೋಪಿ ದೂರುದಾರೆ ಮತ್ತು ಆಕೆಯ ಸ್ನೇಹಿತೆಯಿಂದ ಹಂತಹಂತವಾಗಿ ಒಟ್ಟು 6.49 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ. ಆದರೆ ಪೂಜೆಯ ಬಳಿಕವೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ ಹಣ ವಾಪಸ್ ನೀಡುವಂತೆ ದೂರುದಾರೆ ಕೇಳಿದ್ದರು. ಹಣವನ್ನೂ ವಾಪಾಸ್ ಮಾಡದೆ, ಫೋನ್ ಕರೆ ಸ್ವೀಕರಿಸದೆ ವಂಚಿಸಿದ ಆರೋಪಿಯ ವಿರುದ್ಧ ನೊಂದ ಮಹಿಳಾ ಕಾನ್ಸ್ಟೇಬಲ್ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.