ಇತ್ತೀಚೆಗೆ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರಳಿರುವ ಕೇಂದ್ರ ಸರ್ಕಾರವು, ಪಾಕ್ ಮೇಲೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಲ್ಲದೆ ಪಾಕ್ ಪ್ರಜೆಗಳು ಭಾರತ ಬಿಟ್ಟು ತೊಲಗುವಂತೆ ಖಡಕ್ ಸೂಚನೆ ಕೊಟ್ಟಿದೆ.
Rain News: ಕರ್ನಾಟಕದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ!
ಅದರಂತೆ, ಪಾಕ್ ಪ್ರಜೆಗಳು ಭಾರತ ಬಿಟ್ಟು ತೊಲಗಲು ನಿಗದಿ ಮಾಡಿದ್ದ ಗಡುವು ಕೊನೆಗೊಂಡಿದೆ. ಕರ್ನಾಟಕದಲ್ಲಿದ್ದ ಅನೇಕ ಪಾಕಿಸ್ತಾನೀಯರು ಮಂಗಳವಾರ ತವರಿಗೆ ತೆರಳಿದ್ದಾರೆ.
17 ವೀಸಾಗಳಡಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿಯರಿಗೆ ಏಪ್ರಿಲ್ 27ರೊಳಗೆ ತೊರೆಯುವಂತೆ ಸೂಚಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಬಂದಿದ್ದವರಿಗೆ ಏಪ್ರಿಲ್ 29 ರೊಳಗೆ ಭಾರತದಿಂದ ವಾಪಸ್ ಹೋಗುವಂತೆ ಆದೇಶಿಸಲಾಗಿತ್ತು. ಹೀಗಾಗಿ, ಪಾಕಿಸ್ತಾನೀಯರು ಭಾರತ ತೊರೆದಿದ್ದಾರೆ. ಕರ್ನಾಟಕದಲ್ಲಿದ್ದ ಹಲವು ಪಾಕ್ ಪ್ರಜೆಗಳು ಮಂಗಳವಾರವೇ ತೆರಳಿದ್ದಾರೆ. ಆದರೆ ಇನ್ನೂ ಕೆಲವು ಮಂದಿ ಇಲ್ಲೇ ಉಳಿದುಕೊಂಡಿದ್ದಾರೆ.
ಕರ್ನಾಟಕದಿಂದ ಹೋದವರೆಷ್ಟು? ಉಳಿದವರೆಷ್ಟು?
ಮೈಸೂರಿನಲ್ಲಿದ್ದ 8 ಮಂದಿ ಪಾಕ್ ಪ್ರಜೆಗಳ ಪೈಕಿ ಮೂವರು ವಾಪಸಾಗಿದ್ದಾರೆ.
ಬೆಂಗಳೂರಿನಲ್ಲಿದ್ದ ನಾಲ್ವರು ಪಾಕ್ ಪ್ರಜೆಗಳು ತವರಿಗೆ ತೆರಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಜನ ಪಾಕಿಸ್ತಾನಿ ಪ್ರಜೆಗಳು ಇದ್ದು, ಇವರೆಲ್ಲ ದೀರ್ಘಾವಧಿ ವೀಸಾದಲ್ಲಿ ಇರುವುದರಿಂದ ಪಾಕಿಸ್ತಾನಕ್ಕೆ ತೆರಳಿಲ್ಲ.
ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಇದ್ದಾರೆ.
ಓರ್ವ ಪಾಕ್ ಮಹಿಳೆ ಕೋಲಾರದ ವ್ಯಕ್ತಿಯನ್ನು ಮದುವೆಯಾಗಿ ಇಲ್ಲೇ ನೆಲೆಸಿದ್ದಾರೆ.
ಬೆಳಗಾವಿಯಲ್ಲಿ 6 ಪಾಕಿಸ್ತಾನೀಯರು ದೀರ್ಘಾವಧಿ ವೀಸಾದಲ್ಲಿ ಇದ್ದಾರೆ.
ಓರ್ವ ಮಹಿಳೆ ರಾಯಚೂರಿನ ವ್ಯಕ್ತಿಯನ್ನು ಮದುವೆಯಾಗಿ ಇಲ್ಲೇ ನೆಲೆಸಿದ್ದಾರೆ.
ತುಮಕೂರಿನಲ್ಲಿ ಮೂವರು ದೀರ್ಘಾವಧಿ ವೀಸಾದಡಿ ವಾಸವಿದ್ದಾರೆ.
ಕಲಬುರಗಿಯಲ್ಲಿ 6 ಪಾಕಿಸ್ತಾನೀಯರು ಇಲ್ಲಿನವರನ್ನು ವಿವಾಹವಾಗಿ ವಾಸವಿದ್ದಾರೆ.
ರಾಮನಗರದಲ್ಲಿಯೂ ಓರ್ವ ಮಹಿಳೆ ವಿವಾಹವಾಗಿ ವಾಸವಿದ್ದಾಳೆ.
ಯಾದಗಿರಿ ಜಿಲ್ಲೆ ಸುರಪುರದಲ್ಲಿಯೂ ವಿವಾಹಿತ ಪಾಕ್ ಮಹಿಳೆ ಒಬ್ಬರಿದ್ದಾರೆ.