ಬೆಂಗಳೂರು: ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಭಯೋತ್ಪಾದಕರು ಭಾರತೀಯ 26 ಮಂದಿಯ ಜೀವ ತೆಗೆದಿದ್ದರು. ಅದರಲ್ಲಿ ಬೆಂಗಳೂರಿನ ಭರತ್ ಭೂಷಣ್ ಕೂಡ ಪ್ರಾಣ ಕಳೆದುಕೊಂಡಿದ್ದರು.
ಈ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಉಡೀಸ್ ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟಿದ್ದ ಭರತ್ ಅವರ ಅಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಾವು ಸರ್ಕಾರದ ಜೊತೆ ಇದ್ದೇವೆ. ಸರ್ಕಾರ ಏನ್ ಮಾಡ್ಬೇಕು ಅದನ್ನ ಡಿಟೇಲ್ ಆಗಿ ಮಾಡ್ತಿದ್ದಾರೆ. ನನ್ನ ತಮ್ಮ ಅಂತೂ ವಾಪಸ್ ಬರೋದಿಲ್ಲ. ನಮಗೆ ಬೆಳಗ್ಗೆ ಎದ್ದಾಗಲೇ ವಿಷಯ ಗೊತ್ತಾಗಿದ್ದು. ಅಲ್ಲಿಯವರೆಗೂ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಆರ್ಮಿ ಕಾರ್ಯಾಚರಣೆ ಮಾಡಿ ಎಲ್ಲಾ ಪ್ರಯತ್ನ ಮಾಡಿದ್ರು. ಸಿಕ್ಕಿದ್ದವನೊಬ್ಬ ಮೊದಲು ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಆದರೂ ನಮ್ಮವರು ಪತ್ತೆಹಚ್ಚಿ ದಾಳಿ ಮಾಡಿದ್ದಾರೆ. ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ತಿದ್ದಾರೆ ಅನ್ನೋ ಭರವಸೆ ಇದೆ. ಯಾರ ಮನೆಯವರಿಗೂ ಈತರನಾದ ಸಮಸ್ಯೆ ಆಗಬಾರದು ಎಂದರು.
ಪಹಲ್ಗಾಮ್ ದಾಳಿಗೆ ಲೋಕಲ್ ಸಪೋರ್ಟ್ ಇದೆ:
ನನ್ನ ತಮ್ಮನ ಮಗುಗೆ ಇದರ ಬಗ್ಗೆ ನಾವು ಏನು ಹೇಳೋದು ಇಲ್ಲ. 3.5 ವರ್ಷದ ಕಂದಮ್ಮ ಏನು ಕಳ್ಕೊಂಡಿದೆ ಅಂತಾನು ಗೊತ್ತಿಲ್ಲ. ಅದರ ಬಗ್ಗೆ ನಾವು ಏನು ಕೂಡಾ ಮಾತು ಆಡ್ತಾಇಲ್ಲ ಎಂದರು. ಇನ್ನೂ ದಾಳಿ ಬಗ್ಗೆ ಇಡೀ ವಿಶ್ವದಿಂದ ಬಗ್ಗೆ ಅಟೆನ್ಷನ್ ಸಿಕ್ತಾ ಇದೆ. ನಮ್ಮ ಕಡೆಯಿಂದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಇದೆ. ಪಾಕಿಸ್ತಾನ ಉಗ್ರರ ನೆಲೆಗಳನ್ನ ಪೋಷಿಸ್ತಾ ಇದೆ. 9 ಉಗ್ರರ ನೆಲೆಗಳನ್ನ ನಾಶ ಪಡಿಸಿದ್ದಾರೆ. ತಪ್ಪಿಸಿಕೊಂಡವರನ್ನ ಕೂಡಾ ಇನ್ನೂ ಬಲಿ ಹಾಕಬೇಕು . ಪಹಲ್ಗಾಮ್ ನಂತಹ ಘಟನೆಗಳು ಎಂದೂ ಕೂಡಾ ಮತ್ತೆ ನಡೆಯಬಾರದು. ಬಾರ್ಡರ್ ಎಷ್ಟಿದೆ ಉದ್ದಕ್ಕೂ ಸೈನಿಕರು ಜನರ ರಕ್ಷಣೆಗೆ ನಿಲ್ಲಬೇಕು. ಏನಕ್ಕೆ ಅಲ್ಲಿ ಅಷ್ಟು ಸೆಕ್ಯೂರಿಟಿ ಬೇಕು ಅನ್ನೋದು ಪ್ರಶ್ನೆ. ಪಂಜಾಬ್ ಗುಜರಾತ್ ಎಲ್ಲಾ ಬಾರ್ಡರ್ ಶೇರ್ ಮಾಡಿದ್ದಾವೆ. ಆದರೆ ಕಾಶ್ಮೀರಕ್ಕೆ ಅಷ್ಟು ಸೆಕ್ಯೂರಿಟಿ ಯಾಕೆ. ನಮ್ಮ ತಾಯಿ ಯಾಕೆ ಹೋಗ್ತೀರಾ ಅಂತ ಹೇಳಿದ್ರು. ಬೇರೆ ದೇಶಕ್ಕೆ ಎಲ್ಲಾ ಹೋಗ್ತಾರೆ ನೀವೇಕೆ ಇಲ್ಲಿಗೆ ಹೋಗ್ತೀರಾ ಅಂದ್ರು..ಅಲ್ಲದೇ ಅಲ್ಲಿ ಟೆರರಿಸ್ಟ್ ಗಳು ಇದಾರೆ ಅಂತ ಹೇಳಿದ್ರು. ಅದಕ್ಕೆ ನಮ್ಮ ದೇಶದಲ್ಲಿ ಸುತ್ತಾಡೋಕೆ ನಾವೇಕೆ ಭಯ ಪಡ್ಬೇಕು ಅಂದ್ವಿ. ಲೋಕಲ್ ಸಪೋರ್ಟ್ ಇಲ್ಲದೇ ಈತರ ಘಟನೆ ನಡೆಯೋಕೆ ಸಾಧ್ಯ ಇಲ್ಲ. ಎಲ್ಲಾ ಲೋಕಲ್ಸ್ ಸಫೋರ್ಟ್ ಮಾಡಿದಾರೆ ಅಂತ ಹೇಳೋಕೆ ಆಗಲ್ಲ ಎಂದಿದ್ದಾರೆ.