ಬೆಂಗಳೂರು: ಬೇರೆ ದೇಶಗಳಿಗೆ ಹೋಲಿಸಿದೆರೆ, ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಅಂದರೆ ಪ್ರೀತಿ. ಯಾವುದೇ ಸಮಾರಂಭ ಇರಲಿ, ಹಬ್ಬವಿರಲಿ ಅವರು ಮೊದಲು ಕೇಳುವುದೇ ಚಿನ್ನವನ್ನು. ಈ ಹಬ್ಬಕ್ಕಾದ್ರೂ ಒಂದು ಸ್ವಲ್ಪ ಬಂಗಾರ ತೆಗೆದುಕೊಳ್ಳೋಣ ಅನ್ನೋ ಬೇಡಿಕೆ ಇವರ ಬಾಯಲ್ಲಿ ಬರುತ್ತದೆ.
ಇಂದು ಒಂದೇ ದಿನ ಬೆಳ್ಳಿ ಬೆಲೆ ದಾಖಲೆ ಮಟ್ಟಕ್ಕೆ ಏರಿದೆ. ಇಂದು ಶುಕ್ರವಾರ ಬೆಳ್ಳಿ ಬೆಲೆ ಗ್ರಾಮ್ಗೆ 3 ರೂಗಳಷ್ಟು ಹೈಜಂಪ್ ಮಾಡಿದೆ. ನಿನ್ನೆ ಮತ್ತು ಮೊನ್ನೆ ಎರಡೂ ದಿನ ಎರಡೆರಡು ರೂನಷ್ಟು ಹೆಚ್ಚಳವಾಗಿತ್ತು. ಮೂರು ದಿನದಲ್ಲಿ ಬರೋಬ್ಬರಿ 7 ರೂಗಳಷ್ಟು ಏರಿಕೆಯಾಗಿದೆ ಬೆಳ್ಳಿ ಬೆಲೆ. ಇತಿಹಾಸದಲ್ಲಿ ಬೆಳ್ಳಿ ಬೆಲೆ ಇಷ್ಟು ಕ್ಷಿಪ್ರವಾಗಿ ತೀಕ್ಷ್ಣ ಏರಿಕೆ ಆಗಿರುವುದು ಇದೇ ಮೊದಲಿರಬೇಕು.
ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಚಿನ್ನದ ಬೆಲೆ ಭಾರತದಲ್ಲಿ ಇಂದು ಬದಲಾಗದೇ ಹೋದರೂ ಹಲವು ದೇಶಗಳಲ್ಲಿ ಬೆಲೆ ಸ್ವಲ್ಪ ಮಟ್ಟಿಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 91,300 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 99,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 91,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,700 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 6ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 99,600 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,700 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 99,600 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 91,300 ರೂ
- ಚೆನ್ನೈ: 91,300 ರೂ
- ಮುಂಬೈ: 91,300 ರೂ
- ದೆಹಲಿ: 91,450 ರೂ
- ಕೋಲ್ಕತಾ: 91,300 ರೂ
- ಕೇರಳ: 91,300 ರೂ
- ಅಹ್ಮದಾಬಾದ್: 91,350 ರೂ
- ಜೈಪುರ್: 91,450 ರೂ
- ಲಕ್ನೋ: 91,450 ರೂ
- ಭುವನೇಶ್ವರ್: 91,300 ರೂ