ಧಾರವಾಡ: ಹುಬ್ಬಳ್ಳಿ – ಧಾರವಾಡ ಅವಳಿನಗರಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ನಡೆಯುತ್ತಿದೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಚಾರವಾಗಿ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಮಾತನಾಡಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದ ಹಾಲಿವುಡ್ ಸಿನಿಮಾ ಮಿಷನ್ ಇಂಪಾಸಿಬಲ್!
ಅಪರಿಚಿತ ವ್ಯಕ್ತಿಗಳ ಬಗ್ಗೆ ಪರಿಶೀಲಿಸುವಂತೆ ನಾನು ಪತ್ರ ಬರೆದಿದ್ದೇನೆ. ಕೆಲವು ಜಾಗೃತ ನಾಗರಿಕರು ನನಗೆ ಕರೆ ಮಾಡಿದ್ದಾರೆ. ಹೊರಗಿನ ಜನ ಅವಳಿನಗರಗಳಲ್ಲಿ ಓಡಾಡುತ್ತಿದಾರೆ ಎಂದು ಹೇಳಿದ್ದಾರೆ. ಯಾವ ರೀತಿ ಇದ್ದಾರೆ ಎಂದು ಕೇಳಿದಾಗ ಅವರು ಬೇರೆ ರೀತಿಯ ಜನ ಇದ್ದಾರೆ ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಜನರ ರೀತಿ ಇದ್ದಾರಾ ಎಂದು ಪ್ರಶ್ನಿಸಿದರೆ, ಅವರು, ಪಾಕಿಸ್ತಾನ ಜನರ ರೀತಿ ಇದ್ದಾರೆ ಎಂದು ಹೇಳಿದ್ದಾರೆ ಎಂದರು.
ಹೀಗಾಗಿ ನಾನು ಆಯುಕ್ತರಿಗೆ ಕರೆ ಮಾಡಿ ಹೇಳಿದ್ದೇನೆ. ಅಷ್ಟೇ ಅಲ್ಲದೆ ಆಯಕ್ತರಿಗೆ ಹಾಗೂ ಗೃಹ ಮಂತ್ರಿಗೆ ಪತ್ರ ಬರೆದಿದ್ದೇನೆ. ಇದು ಸೂಕ್ಷ್ಮ ವಿಚಾರವಾಗಿದ್ದಕ್ಕೆ ಯಾವ ಪತ್ರಿಕೆಗೆ ಹಾಗೂ ಮೀಡಿಯಾಗೆ ಹೇಳಿಕೆ ನೀಡಿರಲಿಲ್ಲ. ಅವರತನಿಖೆಗೆ ಅನೂಕೂಲವಾಗಲೆಂದು ನಾನು ಹೇಳಿಲ್ಲ. ಆದರೆ ಎಂಟು ದಿನ ಆದರೂ ಯಾವುದೇ ವಿಚಾರಣೆ ಆಗಿಲ್ಲ ಎಂದರು.
ಪೊಲೀಸ್ ಕಮಿಷನರ್ ಪತ್ರದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ. ಇಷ್ಟೊಂದು ಸೀರಿಯಸ್ ಅಲಿಗೇಷನ್ ಮಾಡಿದಾಗಲೂ ಏನಾಗಿದೆ ಎಂದು ಪೊಲೀಸ್ ಕಮಿಷನರ್ ಕೇಳಿಲ್ಲ. ಆ ಕುರಿತ ವಿಚಾರಣೆ ಮಾಡಬೇಕೆನ್ನುವ ಮನಸ್ಥಿತಿ ಕೂಡ ಇಲ್ಲ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಎಂದರು.
ಆಯುಕ್ತರಿಗೆ ಅಷ್ಟೇ ಅಲ್ಲ, ನಾನು ಗೃಹ ಮಂತ್ರಿಗಳಿಗೂ ಪತ್ರ ಬರೆದಿದ್ದೇನೆ. ಈ ಸರ್ಕಾರದ ಮೇಲಿನವರು ದೇಶಘಾತುಕ ಶಕ್ತಿಗಳಿಗೆ ನಮ್ಮ ಬ್ರದರ್ಸ್ ಎಂದು ಹೇಳುತ್ತಿದ್ದಾರೆ. ಕೇಳಗಿನವರು ಕೂಡ ಅವರ ಹಾಗೆಯೇ ಅನುಕರಣೆ ಮಾಡುತ್ತಿದ್ದಾರೆ ಎಂದರು.
ಅವಳಿನಗರದಲ್ಲಿ ಏಳರಿಂದ ಎಂಟು ಜನ ಗುಂಪಾಗಿ ಓಡಾಡುತ್ತಿದ್ದಾರೆ. ಅವರ ಆ್ಯಕ್ಟಿವಿಟಿ ಏನು ಗೊತ್ತಿಲ್ಲ.
ಪ್ರತಿದಿನ ಬೆಳಿಗ್ಗೆ ಅಲ್ಲಿ ನಮಾಜ್ಞ ಟೈಮ್‌ಗೆ ಬರುತ್ತಾರೆ ಎಂದು ಜನ ಹೇಳಿದ್ದಾರೆ. ಇದರ ಬಗ್ಗೆ ಪೊಲೀಸರ ಕ್ರಮ ಆಗಿಲ್ಲ. ಪೊಲೀಸ ಕಮಿಷನರ್ ಬರೀ ಕಲೆಕ್ಷನ್ ಧಂದೆಯಲ್ಲಿ ಬ್ಯುಸಿಯಾಗಿದ್ದಾರೆ
ಎಂದು ಬೆಲ್ಲದ ಕಿಡಿಕಾರಿದರು.