ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರದಲ್ಲಿ ಭಾರತ ಪಾಕಿಸ್ತಾನದ ಮೇಲೆ ತೀವ್ರ ಪ್ರತೀಕಾರದ ತೀರಿಸಿಕೊಂಡಿದೆ. ಈಗಾಗಲೇ ಪಾಕ್ ದಾಳಿ ನಡೆಸಿದ ಹದಿಮೂರು ದಿನಗಳಲ್ಲೇ ಪಾಕ್ ಮೇಲೆ ದಾಳಿ ನಡೆಸುವ ಮೂಲಕ ಸರಿಯಾದ ಉತ್ತರ ನೀಡಿದೆ. ಈ ಹಿನ್ನೆಲೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಭಾರತದ ಸೇನೆ ಮತ್ತು ಪಿಎಂ ನರೇಂದ್ರ ಮೋದಿ ಅವರನ್ನು ಕೊಂಡಾಡಿದ್ದಾರೆ.
ಯೋಧರ ಹೋರಾಟ ಶುರುವಾಗಿದೆ. ಮಿಷನ್ ಮುಗಿಯೋವರೆಗೂ ನಿಲ್ಲೋದಿಲ್ಲ. ಪ್ರಧಾನಿ ಮೋದಿ ಅವರೇ, ಹೋಮ್ ಮಿನಿಸ್ಟರ್ ಅಮಿತ್ ಶಾ ಅವರೇ ಇಡೀ ದೇಶ ನಿಮ್ಮ ಜೊತೆಗೆ ಇರುತ್ತದೆ. ಆಪರೇಷನ್ ಸಿಂಧೂರ, ಜೈ ಹಿಂದ್ ಎಂದು ಎಕ್ಸ್ನಲ್ಲಿ ರಜನಿಕಾಂತ್ ಬರೆದುಕೊಂಡಿದ್ದಾರೆ. ಈ ಮೂಲಕ ಹೋರಾಟ ಶುರುವಾಗಿದೆ ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
The fighter's fight begins…
No stopping until the mission is accomplished!
The entire NATION is with you. @PMOIndia @HMOIndia#OperationSindoor
JAI HIND 🇮🇳
— Rajinikanth (@rajinikanth) May 7, 2025
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.