ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರ ಬೆಂಗಳೂರಿನ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸತತ 28 ಗಂಟೆಗಳ ಕಾಲ ವಿನಯ್ ಕುಲಕರ್ಣಿ ಅವರ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದರು.
ಇನ್ನೂ ಈ ವಿಚಾರವಾಗಿ ಮಾತನಾಡಿದ ವಿನಯ್ ಕುಲಕರ್ಣಿ, ಐಶ್ವರ್ಯಾ ಗೌಡ ಜೊತೆ ನನ್ನ ಯಾವ ವ್ಯವಹಾರವೂ ಇಲ್ಲ, ಹಣದ ವರ್ಗಾವಣೆಯೂ ಆಗಿಲ್ಲ. ಮಂಜುಳಾ ಪಾಟೀಲ್ ಮತ್ತು ಐಶ್ವರ್ಯಾ ಗೌಡ ನಡುವೆ ನಾನು ರಾಜಿ ಸಂಧಾನ ಮಾಡಿಸಿಲ್ಲ.
Mango Benefits: ನಿಮಗೆ ಗೊತ್ತೆ..? ತೂಕ ಹೆಚ್ಚಾಗುವುದನ್ನು ತಡೆಯುತ್ತವಂತೆ ಮಾವಿನ ಹಣ್ಣು!
ಈಗ ಕೆಲ ತಿಂಗಳ ಹಿಂದೆ ಪ್ರಕರಣ ದಾಖಲಾದ ನಂತರ ಪರಿಚಯವಷ್ಟೆ. ಪ್ರಕರಣ ಮುಂದುವರೆಸುವುದು ಬೇಡ, ನನ್ನ ಹಣ ಕೊಡಿಸಿ ಎಂದು ಬಂದಾಗ ಕರೆದು ವಿಚಾರಿಸಿದ್ದೆ. ಅವರವರ ನಡುವೆ ಮಾತುಕತೆ ಸರಿ ಹೋಗಲಿಲ್ಲವಂತೆ. ಜನರಿಗೆ ಯಾರೇ ಮೋಸ ಮಾಡಿದರೂ ತಪ್ಪೇ ಎಂದು ಹೇಳಿದರು.
ಇ.ಡಿಯವರು ಬರೋದು ಒಂದಕ್ಕೆ, ಪರಿಶೀಲನೆ ಮಾಡುವುದು ಇನ್ನೊಂದು. ನನ್ನ ವಿರುದ್ಧದ ಷಡ್ಯಂತ್ರ ಇಂದು, ನಿನ್ನೆಯದ್ದಲ್ಲ. ನಾನೋರ್ವ ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಜನರನ್ನು ಭೇಟಿಯಾಗಲು ಆಗುತ್ತಿಲ್ಲ.
ನನಗೆ ಕಿರುಕುಳ ನೀಡುವುದು ಮಾತ್ರ ನಿಂತಿಲ್ಲ. ಪಕ್ಷ ಯಾವುದೇ ಇರಲಿ ಓರ್ವ ಮನುಷ್ಯನಿಗೆ ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು. ಅಧಿಕಾರವಿದೆ ಎಂದು ಈ ರೀತಿ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ನೋವಿನ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.