ಮಂಡ್ಯ : ಸೆಸ್ಕ್ ವತಿಯಿಂದ ಮದ್ದೂರು ನಗರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಘಟಕ – 2 ಶಾಖಾ ವ್ಯಾಪ್ತಿಯ ಎಫ್ -1 ಮದ್ದೂರು ಮತ್ತು ಎಫ್ – 10 ಮಠದದೊಡ್ಡಿ ಎನ್.ಜೆ.ವೈ ಫೀಡರ್ ವಿದ್ಯುತ್ ಮಾರ್ಗದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 66/11ಕೆವಿ ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11 ಕೆವಿ. ಎಫ್ -1 ಮದ್ದೂರು ಮಾರ್ಗದ ಕೊಲ್ಲಿ ಸರ್ಕಲ್, ಕೊಪ್ಪ ಸರ್ಕಲ್,
ಶಿವಪುರ, ಹಳೇ ಎಂ.ಸಿ ರಸ್ತೆ, ವಿವಿ ನಗರ 9 ನೇ ಕ್ರಾಸ್ ಎಫ್ -10 ಮಠದದೊಡ್ಡಿ ಎನ್.ಜೆ.ವೈ ಫೀಡರ್ ನ ಗ್ರಾಮಗಳಾದ ಕ್ಯಾತಘಟ್ಟ, ಬೊಮ್ಮನದೊಡ್ಡಿ, ಮಠದದೊಡ್ಡಿ, ವೈದ್ಯನಾಥಪುರ, ನಗರಕೆರೆ, ಉಪ್ಪಿನಕೆರೆ, ಸೋಂಪುರ, ಉಪ್ಪಾರದೊಡ್ಡಿ, ಮಾಲಗಾರನಹಳ್ಳಿ ಹಾಗೂ ಅಜ್ಜಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ದಿನಾಂಕ 24-05-2025 ರ ಗುರುವಾರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರ ಸಹಕರಿಸಬೇಕೆಂದು ಸೆಸ್ಕ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ