ಇದು ನಿಜಕ್ಕೂ ಹೃದಯಕ್ಕೆ ಘಾಸಿಯಾಗುವ ವಿಚಾರ. ಇತ್ತೀಚೆಗೆ ಯುವಕರ ಹೃದಯದ ಲಬ್ಡಬ್ ಹೆಚ್ಚಾಗಿದೆ. ಹೃದಯ ಹಿಂಡುತ್ತಿದೆ. ಜೀವ ಬೆಂಡಾಗುತ್ತಿದೆ. ಹಾಸನ ಜಿಲ್ಲೆ ಹೃದಯಾಘಾತಗಳ ಹಾಟ್ಸ್ಪಾಟ್ ಆಗಿ ಬದಲಾಗಿದೆ. ದೇಹದಲ್ಲಿ ಕಂಡುಬರುವ ಎಲ್ಲಾ ನೋವುಗಳು ಹೃದಯಾಘಾತದ ಲಕ್ಷಣಗಳು ಎಂದು ಹೇಳಲು ಆಗದು. ಆದರೆ ನೋವಿನ ಜತೆಗೆ ಬೇರೆ ಲಕ್ಷಣಗಳು ಕೂಡ ಇದ್ದರೆ ಆಗ ಇದು ಹೃದಯಾಘಾತದ ಸೂಚನೆ ಎಂದು ಹೇಳಬಹುದು.
ಹೃದಯಾಘಾತದ ಲಕ್ಷಣಗಳು
- ಹೃದಯಾಘಾತ ವೇಳೆ ಎದೆಯಲ್ಲಿ ನೋವು, ಅಸ್ವಸ್ಥತೆ, ಭಾರವಾಗು ವುದು, ಹಿಸುಕಿದಂತೆ ಆಗುವುದು. ಎದೆಯಲ್ಲಿ ಆರಂಭವಾಗುವ ನೋವು ಕೈ, ಭುಜ, ಕುತ್ತಿಗೆ, ಬೆನ್ನು, ದವಡೆ ಅಥವಾ ಸೊಂಟಕ್ಕೂ ತಲುಪ ಬಹುದು.
- ಕೆಲವರು ಇದನ್ನು ಅಜೀರ್ಣ ಅಥವಾ ಎದೆಯುರಿ ಎಂದು ತಪ್ಪಾಗಿ ತಿಳಿದುಕೊಳ್ಳಬಹುದು. ಇದರ ಲಕ್ಷಣಗಳ ಬಗ್ಗೆ ತಿಳಿಯಲು ಈ ಲೇಖನ ಓದಿ…
ಪುರುಷರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು
- ಹೃದಯಾಘಾತವು ಪುರುಷರು ಹಾಗೂ ಮಹಿಳೆಯರಲ್ಲಿ ತುಂಬಾ ಭಿನ್ನವಾಗಿ ಪರಿಣಾಮ ಬೀರುವುದು. ಆದರೆ ಎರಡೂ ಲಿಂಗಗಳಲ್ಲಿ ಎದೆನೋವಿನ ಲಕ್ಷಣವು ಕಾಣಿಸುವುದು.
- ಮಹಿಳೆಯರಲ್ಲಿ ವಾಕರಿಕೆ, ಬೆನ್ನು ಮತ್ತು ದವಡೆ ನೋವು, ಉಸಿ ರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಈ ಲಕ್ಷಣ ಗಳನ್ನು ಕಡೆಗಣಿ ಸುವುದು ತುಂಬಾ ಅಪಾಯಕಾರಿ ಮತ್ತು ಇಂತಹ ಲಕ್ಷಣಗಳನ್ನು ಆರಂಭದಲ್ಲೇ ಪತ್ತೆ ಮಾಡುವುದು ಅತೀ ಅಗತ್ಯ.
ಪುರುಷರಲ್ಲಿ ಹೃದಯಾಘಾತದ ಲಕ್ಷಣಗಳು
- ಉಸಿರಾಟದ ತೊಂದರೆ
- ನೋವು ಕೈ, ಭುಜ, ಕುತ್ತಿಗೆ, ದವಡೆ ಮತ್ತು ಹೊಟ್ಟೆಯ ಮೇಲ್ಭಾಗಕ್ಕೆ ಹಬ್ಬುವುದು.
- ವಾಕರಿಕೆ
- ಎದೆಯುರಿ ಮತ್ತು ಅಜೀರ್ಣ
- ನಿಯಮಿತ ಸೆಳೆತ ಮತ್ತು ಎದೆನೋವು
- ಹಠಾತ್ ಅಥವಾ ಅತಿಯಾದ ತಲೆನೋವು ಮತ್ತು ಬಳಲಿಕೆ.
- ಬೆವರುವಿಕೆ
- ನಿಶ್ಯಕ್ತಿ
- ಉಸಿರಾಡಲು ಕಷ್ಟಪಡುವುದು.
ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು
- ನಿಶ್ಯಕ್ತಿ
- ದೇಹದ ಮೇಲಿನ ಭಾಗದಲ್ಲಿ ನೋವು
- ಅತಿಯಾಗಿ ಬೆವರುವುದು
- ಅಸ್ಥಿರ ಮತ್ತು ನಿದ್ರೆಗೆ ತೊಂದರೆ
- ಹೊಟ್ಟೆಯ ಸಮಸ್ಯೆ
- ವಾಕರಿಕೆ ಮತ್ತು ವಾಂತಿ
- ಅಜೀರ್ಣ
- ಲಘು ತಲೆನೋವು
ತಜ್ಞರು ಏನು ಹೇಳುವರು
- ಪುರುಷರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಕೆಲವು ಲಕ್ಷಣಗಳು ಭಿನ್ನವಾಗಿರುವುದು. ಪುರುಷರಲ್ಲಿ ಎದೆನೋವು ಕಾಣಿಸಿಕೊಂಡರೆ, ಮಹಿಳೆಯರಲ್ಲಿ ವಾಕರಿಕೆ, ಬಳಲಿಕೆ, ಉಸಿರಾಟದ ತೊಂದರೆ ಇತ್ಯಾದಿ ಕಾಣಿಸಿಕೊಳ್ಳುವುದು.
- ಈ ಲಕ್ಷಣಗಳನ್ನು ಲಘುವಾಗಿ ಪರಿಗಣಿಸದಂತೆ ವೈದ್ಯರು ಹೇಳಿರುವರು. ಇಂತಹ ಲಕ್ಷಣಗಳು ಪದೇ ಪದೇ ಕಂಡುಬರುತ್ತ ಲಿದ್ದರೆ, ಆಗ ನೀವು ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಿ.
- ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ಸಾವಿನ ಸಮಸ್ಯೆಯು ಇಂದು ವಿಶ್ವದೆಲ್ಲೆಡೆಯಲ್ಲಿ ಅತಿಯಾಗುತ್ತಲಿದೆ. ಆದರೆ ಮುನ್ನೆಚ್ಚರಿಕೆ ತೆಗೆದುಕೊಂಡರೆ ಆಗ ಇದನ್ನು ಶೇ.೮೦ ರಷ್ಟು ಕಡಿಮೆ ಮಾಡಬಹುದು.