ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ನ ಉಗ್ರರ ನೆಲೆಗಳನ್ನು ಉಡೀಸ್ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ರಾಜ್ಯದಲ್ಲಿರುವ ಪಾಕಿಸ್ತಾನಿಗಳಿಗೆ ಬಿರಿಯಾನಿ ತಂದು ಕೊಟ್ಟು ಇರಿಸಿಕೊಂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕೋರ್ಟ್ ನಲ್ಲಿ ಅರ್ಜಿ ಹಾಕಿ ಅವರನ್ನು ಇಲ್ಲೇ ಉಳಿಸಲು ಪಿತೂರಿ ಮಾಡಿದ್ದಾರೆ.
ಇಲ್ಲಿರುವ ಪಾಕಿಸ್ತಾನಿಗಳನ್ನು ಒದ್ದು ಹೊರಗೆ ಹಾಕಬೇಕು. ಅದಕ್ಕಾಗಿ ನಾಳೆ ಗವರ್ನರ್ ಭೇಟಿ ಯಾಗಿ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ದೇಶಾದ್ಯಂತ ಮೊಳಗಿದ ಸೈರನ್..ಆಪರೇಷನ್ ಅಭಯ ಹೆಸರಿನಲ್ಲಿ ಮಾಕ್ ಡ್ರಿಲ್ ಶುರು!
ಇಡೀ ದೇಶದಲ್ಲೇ ಪಾಕಿಸ್ತಾನಿಗಳನ್ನು ಹೊರಗೆ ಕಳುಹಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಇನ್ನೂ ಕಳುಹಿಸಿಲ್ಲ. ಅವರು ಎಲ್ಲರನ್ನೂ ಪಾಕಿಸ್ತಾನಕ್ಕೆ ಕಳುಹಿಸುವಂತೆ ಕೋರಿ ಗವರ್ನರ್ ಒತ್ತಾಯಿಸುತ್ತೇವೆ ಎಂದು ಅಶೋಕ್ ತಿಳಿಸಿದರು.