ಮೈಸೂರು: 10 ವರ್ಷದ ಹಿಂದಿನ ಗಣತಿಯನ್ನು ಈಗ ಬಿಡುಗಡೆ ಮಾಡಲು ಹೊರಟಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಈ ಗಣತಿ ಅವೈಜ್ಞಾನಿಕ ಅಂತ ಈಗಾಗಲೇ ಹೇಳಿದ್ದೇವೆ. ಜಾತಿಗಣತಿಗೆ ನಮ್ಮ ತಕರಾರಿಲ್ಲ. ಆದರೆ ಅದು ವೈಜ್ಞಾನಿಕವಾಗಿ ಆಗಬೇಕು.
ಹುಡುಗಿಯರೇ ನೀವು ಕೂಡ ಮೆಡಿಮಿಕ್ಸ್ ಸೋಪ್ ಬಳಸ್ತಿದ್ದೀರಾ? ಇದು ಖಂಡಿತ ನಿಮಗಲ್ಲ!
ಈ ಬಗ್ಗೆ ಸರ್ಕಾರ ಏನು ಮಾಡತ್ತದೆ ಎಂದು ನೋಡೋಣ. 10 ವರ್ಷದ ಹಿಂದಿನ ಗಣತಿಯನ್ನು ಈಗ ಬಿಡುಗಡೆ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ ಅಂತ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಜಾತಿಗಣತಿಯನ್ನು ರಾಜಕೀಯವಾಗಿ ಎಲ್ಲರೂ ಬಳಕೆ ಮಾಡಿಕೊಳ್ಳುವುದು ಗೊತ್ತಿರುವ ವಿಚಾರ. ಆದರೆ ಸರಿಯಾದ ರೀತಿಯಲ್ಲಿ ಗಣತಿ ಆಗಬೇಕು ಎಂದು ಹೇಳಿದ್ದಾರೆ.