ಬೆಂಗಳೂರು: ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ವಿಂಗ್ ಕಮಾಂಡರ್ ಬೋಸ್ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿದೆ. ಇದೀಗ ವಿಂಗ್ ಕಮಾಂಡರ್ ಮೇಲೆ ಯುವಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಯುವಕ ವಿಕಾಸ್ ತಾಯಿ ಪ್ರಕರಣದಲ್ಲಿ ಮಗನದ್ದು ಯಾವುದೇ ತಪ್ಪು ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೈಕಿನ ಸೈಲೆನ್ಸರ್‌ಗೆ ಕಾರು ಟಚ್ ಆಗಿದೆ. ಈ ವೇಳೆ ಹಿಂದಿಯಲ್ಲಿ ಬೈದಿದ್ದಾರೆ. ಹಿಂದಿಯಲ್ಲಿ ಹೇಳಿದ್ದು ಅರ್ಥ ಆಗಿಲ್ಲ ಎಂದು ಹೇಳಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಮಹಿಳೆ ಬಳಿ ಕೇಳಬಾರದೆಂದು ಗಂಡನ ಬಳಿ ಕೇಳಿದ್ದಾನೆ.
ನೀವು ಯಾವಾಗಲೂ ಯಂಗ್ ಆಗಿ ಕಾಣಿಸ್ಬೇಕಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
ವಿಂಗ್ ಕಮಾಂಡರ್‌ನನ್ನು ಕೇಳಿದ್ದಕ್ಕೆ ಮಗನನ್ನು ತಳ್ಳಿದ್ದಾರೆ. ಕೈ ಕಚ್ಚಿ, ಮೈ ಪರಚಿದ್ದಾರೆ. ಬೈಕ್ ಅನ್ನು ಎತ್ತಿಹಾಕಿ ಕಾಲಿಂದ ಒದ್ದಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿ ನಮ್ಮ ಮೇಲೆಯೇ ಗೂಬೆ ಕೂರಿಸಿದ್ದಾರೆ. ಇದು ಎಷ್ಟು ನ್ಯಾಯ ಎಂದು ಯುವಕನ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ವಿಂಗ್ ಕಮಾಂಡರ್ ಬಂಧನಕ್ಕೆ ಆಗ್ರಹ ಹೆಚ್ಚಿದೆ. ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಮನಸೋಇಚ್ಛೆ ಥಳಿಸಿದ್ದಾರೆ. ತೀವ್ರ ಹೊಡೆತದಿಂದ ಯುವಕ ಅಸ್ವಸ್ಥನಾಗಿ ಬಿದ್ದಿದ್ದಾನೆ.
ಯುವಕನ ರಕ್ಷಣೆಗೆ ಧಾವಿಸಿದ ಸ್ಥಳೀಯರಿಗೆ ವಿಂಗ್ ಕಮಾಂಡರ್ ಶಿಲಾದಿತ್ಯಾ ಅವಾಜ್ ಕೂಡ ಹಾಕಿದ್ದಾರೆ. ಕನ್ನಡಿಗನ ಮೇಲೆ ಹಲ್ಲೆಗೆ ಕನ್ನಡಿಗರು ಕೆರಳಿದ್ದಾರೆ. ಸೈನಿಕನ ಹೆಸರಲ್ಲಿ ಸಿಂಪತಿ ಗಿಟ್ಟಿಸಿಕೊಂಡವನ ಬಂಧನಕ್ಕೆ ಪಟ್ಟುಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಂಗ್ ಕಮಾಂಡರ್ ಬಂಧನಕ್ಕೆ ಆಗ್ರಹ ಹೆಚ್ಚಿದ್ದು, ಸಂಘಟನೆಗಳು ಬೈಯಪ್ಪನಹಳ್ಳಿ ಪೊಲೀಸರಿಗೆ ಮನವಿ ಮಾಡಲಿವೆ.