ಬೆಂಗಳೂರು: ಮನೆಯಿಂದ ಹೊರಗಡೆ ನಾಯಿಯನ್ನ ಓಡಾಡಲು ಬಿಡುವ ಮುನ್ನ ಎಚ್ಚರವಾಗಿರುವುದು ಒಳ್ಳೆಯದು. ವಾಕಿಂಗ್ ಕರೆದುಕೊಂಡು ಹೋಗುವಾಗಲು ಎಚ್ಚರವಾಗಿರಬೇಕು.. ಯಾಕಂದ್ರೆ ನಾಯಿಯನ್ನು ಸಹ ಕಳ್ಳತನ ಮಾಡಿ ಎಸ್ಕೇಪ್ ಆಗ್ತಾರೆ.
ಹೌದು ಕಳೆದ ತಿಂಗಳು ಮಾ. 12ರ ರಾತ್ರಿ ಜಯನಗರದ 9ನೇ ಬ್ಲಾಕ್ನಲ್ಲಿ ನಾಯಿಯನ್ನು ವಾಕಿಂಗ್ಗೆ ಕರೆದೊಯ್ದ ವೇಳೆ ಕಳ್ಳರು ನಾಯಿಯನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.
ಒಂದು ಮುತ್ತಿಗೆ 50 ಸಾವಿರ: ಹಣ ವಾಪಸ್ ಕೇಳಿದ್ದಕ್ಕೆ ಹನಿಟ್ರ್ಯಾಪ್ ಬೆದರಿಕೆ, ಶಿಕ್ಷಕಿ ಸೇರಿ ಮೂವರು ಅರೆಸ್ಟ್!
ಮಧುರಾ ಎಂಬುವವರು ರೀಚಿ ಎಂಬ ಹೆಸರಿನ ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹೆಲ್ಮೆಟ್ ಹಾಕಿ ಬೈಕ್ನಲ್ಲಿ ಬಂದ ಅಪರಿಚಿತರು ಕೈಯಲ್ಲಿ ಹಿಡಿದಿದ್ದ ನಾಯಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಸಿಸಿಟಿವಿಯಲ್ಲಿ ನಾಯಿ ಕಿತ್ತುಕೊಂಡು ಹೋಗಿರುವ ದೃಶ್ಯ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿಯ ಮಾಲೀಕರು ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ 10,000 ಸಾವಿರ ರೂ. ಬೆಲೆ ಬಾಳುವ ನಾಯಿ ಎಂದು ಉಲ್ಲೇಖಿಸಲಾಗಿದೆ.