ಮಾಡ್ರೆನ್ ಲೈಫ್ ಸ್ಟೈಲ್ನಿಂದಾಗಿ ಅನೇಕ ಮಂದಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ವಯಸ್ಸು ಇನ್ನೂ ಕೂಡ 20-25 ಕೂಡಆಗಿರುವುದಿಲ್ಲ. ಆಗಲೇ ತಲೆ ಕೂದಲಿನಲ್ಲಿ ಅಲ್ಲಲ್ಲಿ ಬಿಳಿ ಕೂದಲು ಕಾಣಿಸುತ್ತಿರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೂದಲಿಗೆ ಎಣ್ಣೆ ಹಚ್ಚುವುದು ಮುಖ್ಯ.
ಕೂದಲಿನಲ್ಲಿ ಮೆಲನಿನ್ ಅಂಶ ಕಡಿಮೆ ಆಗಲು ಹಲವು ಕಾರಣಗಳಿವೆ. ಅದರಲ್ಲಿ ಬದಲಾದ ಜೀವನಶೈಲಿ, ಕಳಪೆ ಆಹಾರಪದ್ದತಿ, ಒತ್ತಡಭರಿತ ಜೀವನಶೈಲಿ ಎಲ್ಲವೂ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ.
ಕೆಲವು ಮನೆಮದ್ದುಗಳನ್ನು ಬಳಸಿ ಬಿಳಿ ಕೂದಳನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಅದರಲ್ಲೂ ಬೇಸಿಗೆಯಲ್ಲಿ ದಾಸವಾಳ ಮತ್ತು ಮೊಸರಿನ ಪ್ಯಾಕ್ ನಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಮೊಸರಿನಲ್ಲಿ ವಿಟಮಿನ್ ಬಿ 12 ಉತ್ತಮ ಪ್ರಮಾಣದಲ್ಲಿದೆ. ಇದು ಕೂದಲಿಗೆ ಉತ್ತಮ ಕಂಡಿಷನರ್ ಆಗಿದ್ದು, ಕೂದಲನ್ನು ಬುಡದಿಂದ ಗಟ್ಟಿಯಾಗಿಸಿ ಹೊಳಪನ್ನು ನೀಡುತ್ತದೆ.
ದಾಸವಾಳದ ಹೂ ಹಾಗೂ ಎಲೆಗಳಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಕೂದಲು ಬೆಳ್ಳಗಾಗುವುದನ್ನು ತಡೆಯಲು ಸಹಾಯಕವಾಗಿದೆ. ಅಲ್ಲದೆ, ಬಿಳಿ ಕೂದಲನ್ನು ಬೇರುಗಳಿಂದ ಕಪ್ಪಾಗಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ.
4 ಸ್ಪೂನ್ ಮೊಸರು, 1 ಸ್ಪೂನ್ ದಾಸವಾಳದ ಪುಡಿ ಅಥವಾ ನಿಮಗೆ ಲಭ್ಯವಿದ್ದರೆ ದಾಸವಾಳದ ಹೂವು, ಎಲೆಗಳಿಂದ ತಯಾರಿಸಿದ ಪೇಸ್ಟ್. ಇವನ್ನೂ ಚೆನ್ನಾಗಿ ಬೆರೆಸಿ ಪ್ಯಾಕ್ ತಯಾರಿಸಿ. ಕೂದಲಿನ ಬುಡಕ್ಕೆ ಹಚ್ಚಿ
ಬೇಸಿಗೆಯಲ್ಲಿ ಈ ರೀತಿ ಕೂದಲಿಗೆ ಮೊಸರು ದಾಸವಾಳದ ಹೇರ್ ಪ್ಯಾಕ್ ಹಚ್ಚಿ 45 ನಿಮಿಷಗಳ ಬಳಿಕ ಸೌಮ್ಯವಾದ ಶಾಂಪೂ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ. ಇದರಿಂದ ಕೂದಲು ಕಪ್ಪಾಗುವುದಷ್ಟೇ ಅಲ್ಲ ಉದ್ದವಾಗಿಯೂ ಬೆಳೆಯುತ್ತೆ.