ಕಲಬುರಗಿ:- ನಗರದಲ್ಲಿ ಗಂಟುಮೂಟೆ ಗ್ಯಾಂಗ್ ಆಕ್ಟೀವ್ ಆಗಿದ್ದು ರಾತೋರಾತ್ರಿ ಫೀಲ್ಡಿಗಿಳಿದು ಕೈ ಚಳಕ ತೋರಿಸಿದೆ. ತಾಜಾ ಉದಾಹರಣೆ ಅಂದ್ರೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಸರಣಿ ಕಳ್ಳತನ ಮಾಡಿ ಗಂಟು ಮೂಟೆ ಕಟ್ಕೊಂಡು ರೈಟ್ ಹೇಳಿದೆ.
ಭೀಮರಾಯಗೌಡ ಅನ್ನೋರ ಮನೆಯಲ್ಲಿ110 ಗ್ರಾಂ ಬೆಳ್ಳಿಯ ಲಕ್ಷ್ಮಿ ಮೂರ್ತಿ ಮತ್ತು ರಜಿಯಾ ಬೇಗಂ ಮನೆಗೆ ಕನ್ನ ಹಾಕಿ 10 ಗ್ರಾಂ ಬಂಗಾರ 30 ಗ್ರಾಂ ಬೆಳ್ಳಿಯ ಚಿನ್ನಾಭರಣ ಕದ್ದು ಹೋಗಿದೆ. ಆರು ಜನರ ಗ್ಯಾಂಗ್ ಓಡಿಹೋಗೋ ಸೀನ್ ಸಿಸಿಟಿವಿಯಲ್ಲಿ ರೆಕಾರ್ಡ ಆಗಿದೆ..ಈ ಬಗ್ಗೆ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕುಗೊಂಡಿದೆ…