ನಾವು ಸೇವಿಸುವ ಆಹಾರ ತ್ಯಾಜ್ಯವಾಗಿ ದೇಹದಿಂದ ಹೊರ ಹೋಗುತ್ತದೆ. ಈ ಒಂದು ಪ್ರಕ್ರಿಯೆಗೆ ನಮ್ಮ ಜೀರ್ಣಾಂಗ ವ್ಯವಸ್ಥೆ ಹಾಗೂ ಇನ್ನಿತರ ಅಂಗಾಂಗಗಳು ಸೇರಿ ಕೆಲಸ ಮಾಡುತ್ತವೆ. ನಾವು ತಿನ್ನುವ ಆಹಾರದಲ್ಲಿ ಇರುವ ಪೌಷ್ಟಿಕ ಸತ್ವಗಳನ್ನು ನಮ್ಮ ದೇಹಕ್ಕೆ ತಲುಪಿಸಿ ಉಳಿದ ತ್ಯಾಜ್ಯವನ್ನು ಮಲ ಹಾಗೂ ಮೂತ್ರದ ರೂಪದಲ್ಲಿ ಹೊರಗೆ ತಳ್ಳುತ್ತವೆ.
Vaibhav Suryavanshi-Modi: IPL ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಭೇಟಿಯಾದ ಪ್ರಧಾನಿ ಮೋದಿ..!
ಸಾಮಾನ್ಯವಾಗಿ ಮಲ ಅಥವಾ ಮೂತ್ರ ಸಹಿಸಲಸಾಧ್ಯವಾದ ವಾಸನೆಯನ್ನು ಕೊಡುತ್ತದೆ. ಮೂತ್ರದ ವಾಸನೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಇದನ್ನು ಬಿಟ್ಟು ಬೇರೆ ತರಹದ ವಾಸನೆ ಮೂತ್ರದಿಂದ ಕಂಡು ಬಂದರೆ ಅದರಿಂದ ನಮ್ಮ ದೇಹದಲ್ಲಿ ಏನೋ ಬೇರೆ ತರಹದ ಕಾಯಿಲೆಗಳು ಇವೆ ಎಂಬುದು ಅರ್ಥವಾಗದ ವಿಷಯವೇನಲ್ಲ. ಯಾವ ಕಾಯಿಲೆಗಳಿಗೆ ಯಾವ ತರಹದ ಮೂತ್ರದ ವಾಸನೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೂತ್ರದಿಂದ ದುರ್ವಾಸನೆ ಬರುವುದು ಸಾಮಾನ್ಯ ಸಮಸ್ಯೆ, ಆದರೆ ಇದ್ದಕ್ಕಿದ್ದಂತೆ ದುರ್ವಾಸನೆ ಬಂದರೆ ಅದನ್ನು ನಿರ್ಲಕ್ಷಿಸಬಾರದು. ಸಾಮಾನ್ಯವಾಗಿ ಈ ಸಮಸ್ಯೆ ಕಂಡುಬರುಯವುದು ಸರಿಯಾಗಿ ನೀರು ಕುಡಿಯದೇ ಇರುವಾಗ ಅಥವಾ ದೇಹ ನಿರ್ಜಲೀಕರಣದ ಸಮಸ್ಯೆಗೆ ಒಳಗಾದಾಗ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಂತ ಇದನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಇತರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎನ್ನುತ್ತಾರೆ ತಜ್ಞರು. ಹಾಗಾದ್ರೆ ಮೂತ್ರದಲ್ಲಿ ಇದ್ದಕ್ಕಿದಂತೆ ವಾಸನೆ ಬರಲು ಕಾರಣಗಳೇನು? ಯಾವ ಕಾಯಿಲೆ ಕಾಣಿಸಿಕೊಂಡರೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ನೋಡೋಣ ಬನ್ನಿ…
ಈ ಸಮಸ್ಯೆಗೆ ಪ್ರಮುಖ ಕಾರಣ ಏನೆಂದರೆ ಸರಿಯಾಗಿ ನೀರು ಕುಡಿಯದೇ ಇರುವುದು! ದೇಹದಲ್ಲಿ ನೀರಿನ ಕೊರತೆ ಕಾಣಿಸಿಕೊಂಡರೆ, ಮೂತ್ರವು ಕೂಡ ದಪ್ಪವಾಗುತ್ತದೆ ಮತ್ತು ಅದರಲ್ಲಿರುವ ಅಮೋನಿಯಾದಂತಹ ವಾಸನೆ ಇನ್ನಷ್ಟು ಬಲಗೊಳ್ಳುತ್ತದೆ! ಇನ್ನು ನಿಮಗೆ ಗೊತ್ತಿರಲಿ, ಬೆಳಗ್ಗಿನ ಜಾವ ಮೂತ್ರದಲ್ಲಿ ವಾಸನೆ ಬರುತ್ತಿದ್ದರೆ, ಅಷ್ಟು ಚಿಂತಿಸಬೇಕಾಗಿಲ್ಲ! ಆದರೆ ಆದರೆ ದಿನವಿಡೀ ನೀರು ಕುಡಿದ ನಂತರವೂ ಇದೇ ರೀತಿ ವಾಸನೆ ಬರುತ್ತಲೆ ಇದ್ದರೆ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ.
ಸಾಮಾನ್ಯವಾಗಿ ಯುಟಿಐ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುವ ಸಮಸ್ಯೆ. ಆದರೆ ಈ ಸಮಸ್ಯೆ ಈಗ ಪುರುಷರಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದೆ. ಈ ಸೋಂಕು ಕಾಣಿಸಿಕೊಂಡರೆ ಮೂತ್ರದಿಂದ ದುರ್ವಾಸನೆ, ಸುಡುವ ಸಂವೇದನೆ, ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ನೋವು ಮುಂತಾದ ಲಕ್ಷಣಗಳು ಕಾಣಿಸಿ ಕೊಳ್ಳುತ್ತದೆ. ಇದು ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಇದು ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡುತ್ತದೆ.
ಒಂದು ವೇಳೆ ನೀವು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರೆ ಹಾಗೂ ಬ್ಲಡ್ ಶುಗರ್ ಲೆವೆಲ್ ಹೆಚ್ಚು-ಕಡಿಮೆ ಆಗುತ್ತಲೇ ಇದ್ದರೆ, ಆವಾಗ ಮೂತ್ರ ದಲ್ಲಿಯೂ ಕೂಡ ಒಂದು ರೀತಿಯ ವಿಚಿತ್ರವಾದ ವಾಸನೆ ಕಾಣಿಸಿಕೊಳ್ಳಲು ಶುರುವಾಗುತ್ತದೆ! ಹೀಗಾಗಿ ಈ ಸಮಸ್ಯೆ ಕಾಣಿಸಿ ಕೊಂಡವರು ತುಂಬಾನೇ ಎಚ್ಚರಿಕೆಯನ್ನು ವಹಿಸಬೇಕು. ಇವೆಲ್ಲಾ ಮಧುಮೇಹ ಕಾಯಿಲೆ ಕಂಟ್ರೋಲ್ ತಪ್ಪುತ್ತಿದೆ ಎನ್ನುವುದರ ಸೂಚನೆ ಆಗಿರಬಹುದು
ಮೂತ್ರವು ಒಂದು ರೀತಿಯಲ್ಲಿ ಕೊಳೆತು ಹೋಗಿರುವ ರೀತಿಯಲ್ಲಿ ವಾಸನೆ ಬರುತ್ತಿದ್ದರೆ, ದೇಹದ ಕಿಡ್ನಿ ಅಥವಾ ಲಿವರ್ ನಲ್ಲಿ ಏನೋ ಸಮಸ್ಯೆಗಳು ಉಂಟಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.ವಿಶೇಷವಾಗಿ ಮೂತ್ರವು ಗಾಢ ಬಣ್ಣದ್ದಾಗಿದ್ದರೆ, ನೊರೆಯಿಂದ ಕೂಡಿದ್ದರೆ ಅಥವಾ ದುರ್ವಾಸನೆಯೊಂದಿಗೆ ರಕ್ತ ಬೆರೆತಿದ್ದರೆ, ನೀವು ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.
ಕೆಲವೊಮ್ಮೆ ಕೆಲವೊಂದು ಬಗೆಯ ಆಹಾರಗಳನ್ನು ಸೇವಿಸುವುದ ರಿಂದಲೂ ಕೂಡ ಮೂತ್ರದಲ್ಲಿ ವಾಸನೆ ಬರಲು ಶುರುವಾಗುತ್ತದೆ! ಉದಾ ಹರಣೆಗೆ, ಬೆಳ್ಳುಳ್ಳಿ, ಈರುಳ್ಳಿ, ಮೀನು ಅಥವಾ ಶತಾವರಿಯಂತಹ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮೂತ್ರವು ವಿಚಿತ್ರವಾದ ವಾಸನೆ ಕಂಡು ಬರಬಹುದು. ಇನ್ನು ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆ ಮಾಡಿದಾಗಲೂ ಕೂಡ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಇನ್ನೂ ಕೆಲವೊಮ್ಮೆ ಮಾತ್ರೆಗಳ ಅಡ್ಡಪರಿಣಾಮಗಳಿಂದಾಗಿ ಅಥವಾ ಕೆಲವೊಂದು ವಿಟಮಿನ್ಸ್ ಪೂರಕಗಳು (ವಿಶೇಷವಾಗಿ ಬಿ-ಕಾಂಪ್ಲೆಕ್ಸ್) ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ತೆಗೆದುಕೊಂಡ ನಂತರ ಮೂತ್ರದ ವಾಸನೆ ಬದಲಾಗಬಹುದು. ಈ ಬದಲಾವಣೆಗಳು ಸಾಮಾನ್ಯವಾಗಿ ಕೆಲವೇ ದಿನ ಗಳಲ್ಲಿ ಪರಿಹರಿಸುತ್ತವೆ, ಆದರೆ ವಾಸನೆಯು ದೀರ್ಘಕಾಲದವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ
ವಿಶೇಷವಾಗಿ ಜನನಾಂಗಗಳ ಭಾಗದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಿ
ಈ ಮೇಲಿನ ರೋಗಲಕ್ಷಣಗಳು ಕಾಣಿಸಿಕೊಂಡರೆ, ಕೂಡಲೇ ಮೂತ್ರ ಪರೀಕ್ಷೆ ಮಾಡಿಸಿಕೊಳ್ಳಿ
ನಿಂಬೆ ಪಾನೀಯ ಅಥವಾ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ