ಇತ್ತೀಚಿನ ವರ್ಷಗಳಲ್ಲಿ ಯಾವುದನ್ನಾದರೂ ಬಿಡಬಹುದು ಆದರೆ ಮೊಬೈಲ್ ಫೋನ್ ಗಳನ್ನು ಬಿಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ರೀತಿಯಲ್ಲಿ, ನಮ್ಮ ಜೀವನವನ್ನು ಸುಲಭ, ವೇಗ ಮತ್ತು ಅನುಕೂಲಕರವಾಗಿಸಿದೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು, ಪ್ರಪಂಚದ ಮಾಹಿತಿ ಪಡೆಯಲು ಅಥವಾ ಯಾವುದೇ ಕೆಲಸವನ್ನು ತಕ್ಷಣ ಪೂರ್ಣಗೊಳಿಸಲು, ದೈನಂದಿನ ಅಗತ್ಯಗಳನ್ನು ಪೂರೈಸಲು ಅತ್ಯಂತ ಸಹಕಾರಿಯಾಗಿದೆ. ಇದರ ಮೂಲಕ ಇಂಟರ್ನೆಟ್ ಜೊತೆಗೆ ಅನೇಕ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ನಮಗೆ ಅಗತ್ಯವಿರುವ ಮಾಹಿತಿಯನ್ನು ನಾವು ಎಲ್ಲಿಯಾದರೂ, ಯಾವಾಗ ಬೇಕಾದರೂ ಪಡೆದುಕೊಳ್ಳಬಹುದಾಗಿದೆ,
ಪೊಲೀಸರು ಹೇಳುವ ಪ್ರಕಾರ ಡಾಟಾ ಕಳ್ಳತನವಾದ ಎಷ್ಟೋ ದಿನಗಳ ನಂತರ ಅದು ನಿಮ್ಮ ಅರಿವಿಗೆ ಬರುತ್ತದೆ. ಆದ್ರೆ ಹೇಗೆ, ಎಲ್ಲಿ ಆಯ್ತು ಅನ್ನೋದು ನಿಮಗೆ ಗೊತ್ತಿರೋದಿಲ್ಲ. ಬಹುತೇಕ ಇಂತಹ ಸ್ಥಳಗಳಲ್ಲಿ ಡಾಟಾ ಕಳುವಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕರಲ್ಲಿ ಸೈಬರ್ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.
ಸಾಕಷ್ಟು ಜನರ ಮೊಬೈಲ್ ಬ್ಯಾಟರಿ ಖಾಲಿ ಆಗುತ್ತದೆ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಫ್ರೀ ಚಾರ್ಜ್ ಹಾಕಿಕೊಂಡು ಬ್ಯಾಟರಿ ಫುಲ್ ಮಾಡಿಕೊಂಡು ಹೋಗುತ್ತಾರೆ. ಆದರೆ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪೊಲೀಸರು ಹೇಳುತ್ತಿದ್ದಾರೆ.
ಹೀಗೆ ಫ್ರೀ ಚಾರ್ಜ್ ಹಾಕುವುದರಿಂದ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆಯೆಂದು ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಬಂದಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.ಫ್ರೀ ಚಾರ್ಜ್ ಪಾಯಿಂಟ್ಗಳನ್ನು ಹಾಕುವವರು ಸೈಬರ್ ವಂಚಕರು ಆಗಿರುವ ಸಾಧ್ಯತೆ ಹೆಚ್ಚು. ಕೆಲವು ಕಡೆ ಚಾರ್ಜರ್ ಕೇಬಲ್ ಫಿಕ್ಸ್ ಇರುತ್ತೆ. ಅಂತ ಕಡೆಯಲ್ಲಿ ಹ್ಯಾಕ್ ಮಾಡಿ ಡಾಟಾ ಕಳ್ಳತನ ಮಾಡುವ ಸಾಧ್ಯತೆ ಇದೆ ಹೀಗಾಗಿ ಎಚ್ಚರದಿಂದ ಇರಲು ಸೈಬರ್ ಪೊಲೀಸ್ ಇಲಾಖೆಯವರು ಹೇಳುತ್ತಿದ್ದಾರೆ.
ನಿಮ್ಮದೆ ಚಾರ್ಜರ್ನಿಂದ ಚಾರ್ಜ್ ಮಾಡಿಕೊಂಡರೆ ಹ್ಯಾಕ್ ಆಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರದೇ ಚಾರ್ಜರ್ನಲ್ಲಿ ನೀವು ನಿಮ್ಮ ಮೊಬೈಲ್ನ್ನು ಚಾರ್ಜ್ ಮಾಡಿಕೊಂಡರೆ ಮೊಬೈಲ್ ಹ್ಯಾಕ್ ಮಾಡಿ ಡಾಟಾ ಕಳ್ಳತನ ಮಾಡುವುದರೊಂದಿಗೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಎಗರಿಸುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಪ್ರಕರಣಗಳು ದಾಖಲಾಗುವ ಮುನ್ನವೇ ಅರಿವು ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಡಾಟಾ ಕಳ್ಳತನವಾದ ಎಷ್ಟೋ ದಿನಗಳ ನಂತರ ಅದು ನಿಮ್ಮ ಅರಿವಿಗೆ ಬರುತ್ತದೆ. ಆದ್ರೆ ಹೇಗೆ, ಎಲ್ಲಿ ಆಯ್ತು ಅನ್ನೋದು ನಿಮಗೆ ಗೊತ್ತಿರೋದಿಲ್ಲ. ಬಹುತೇಕ ಇಂತಹ ಸ್ಥಳಗಳಲ್ಲಿ ಡಾಟಾ ಕಳುವಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕರಲ್ಲಿ ಸೈಬರ್ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.