ನಮ್ಮ ಸೌಂದರ್ಯ ಬೇರೆಯವರಿಗೆ ಚೆನ್ನಾಗಿ ಕಾಣಬೇಕು ಎಂದರೆ ಅದಕ್ಕೆ ನಮ್ಮ ತ್ವಚೆ ಮತ್ತು ನಮ್ಮ ತಲೆ ಕೂದಲು ಪ್ರಮುಖ ಕಾರಣವಾಗುತ್ತದೆ. ನಮ್ಮ ಸೌಂದರ್ಯಕ್ಕೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಕೂಡ ಮಾನ್ಯತೆ ಕೊಡಬೇಕು. ಉತ್ತಮ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಂಡರೆ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ ನಿಜ.
ಬದಲಾವಣೆ ಇಲ್ವೇ ಇಲ್ಲ..ಅಕ್ಟೋಬರ್ 2ರಂದೇ ಕಾಂತಾರ-1 ಅಖಾಡಕ್ಕೆ ಇಳಿಯೋದು ಖಚಿತ-ನಿಶ್ಚಿತ!
ಒಂದೇ ಒಂದು ರೂಪಾಯಿ ಖರ್ಚು ಮಾಡದೆ ನಿಮ್ಮ ಮನೆಯ ಹಿತ್ತಲಲ್ಲಿರುವ ಒಂದು ಎಲೆಯ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಮಾತ್ರವಲ್ಲ, ಹೇರ್ ಫಾಲ್, ಸ್ಪ್ಲಿಟ್ ಹೇರ್, ತಲೆಹೊಟ್ಟು, ನೆತ್ತಿಯಲ್ಲಿ ತುರಿಕೆಯಂತಹ ಸಮಸ್ಯೆಗಳನ್ನು ಸಹ ನಿವಾರಿಸಬಹುದು.
ದಾಸವಾಳದ ಹೂವು ಮತ್ತು ಅದರ ಎಲೆಗಳಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣದ ಅಂಶ ಹೇರಳವಾಗಿರುತ್ತವೆ. ಹಾಗಾಗಿ ಇವುಗಳ ಬಳಕೆಯಿಂದ ಕೂದಲು ಬುಡದಿಂದಲೂ ಕಪ್ಪಾಗಿ ಗಟ್ಟಿಮುಟ್ಟಾಗಿ ಬೆಳೆಯುತ್ತದೆ.
ದಾಸವಾಳದ ಹೂಗಳಂತೆಯೇ ದಾಸವಾಳದ ಎಲೆಗಳಲ್ಲಿ ಅಮೈನೋ ಆಮ್ಲ ಹೇರಳವಾಗಿದೆ. ಕೆರಾಟಿನ್ ಕೂದಲಿಗೆ ಅತ್ಯುತ್ತಮ ಕಂಡೀಷನರ್ ಆಗಿದ್ದು ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ.
ಬಿಳಿ ಕೂದಲಿನ ಸಮಸ್ಯೆ ಇರುವವರು ದಾಸವಾಳದ ಎಲೆಗಳನ್ನು ಬಳಸುವುದರಿಂದ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಲಕ್ಷಣಗಳು ನೆತ್ತಿಯನ್ನು ಆರೋಗ್ಯವಾಗಿರಿಸಿ, ಕೂದಲಿನ ಬುಡಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ಬಿಳಿ ಕೂದಲು ಬೇರುಗಳಿಂದ ಕಪ್ಪಾಗುವಂತೆ ಮಾಡುತ್ತದೆ.
ಹಿಡಿಯಷ್ಟು ದಾಸವಾಳದ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ರುಬ್ಬಿ ಪೇಸ್ಟ್ ತಯಾರಿಸಿ. ಬಳಿಕ ಅದನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ ಲಘು ಮಸಾಜ್ ಮಾಡಿ ಅರ್ಧಗಂಟೆ ಹಾಗೆಯೇ ಬಿಡಿ. ನಂತರ, ಸೌಮ್ಯವಾದ ಶಾಂಪೂ ಬಳಸಿ ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ನಿಯಮಿತವಾಗಿ ದಾಸವಾಳದ ಎಲೆಗಳನ್ನು ಹೀಗೆ ಬಳಸುವುದರಿಂದ ಇದು ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಅಕಾಲಿಕ ಬೂದು ಕೂದಲನ್ನು ಕಡು ಕಪ್ಪಾಗಿಸುವಲ್ಲಿಯೂ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.