Close Menu
Ain Live News
    Facebook X (Twitter) Instagram YouTube
    Saturday, May 31
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕ್ಯಾರೆಟ್ ತಿನ್ನಲು ಕ್ರೇಜ್ ಇದ್ದವರಿಗೆ ಸಿಗಲಿದೆ ಇಷ್ಟೆಲ್ಲಾ ಲಾಭ!

    By AIN AuthorMay 30, 2025
    Share
    Facebook Twitter LinkedIn Pinterest Email
    Demo

    ದೇಹದಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ ಆರೋಗ್ಯಕರವಾಗಿ ಬದುಕುವುದು ಬಹಳ ಸವಾಲಿನ ವಿಚಾರ. ಆದರೆ ಸಾಧ್ಯವಾದಷ್ಟು ಪ್ರತಿಯೊಬ್ಬರೂ ತಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವತ್ತ ಹೆಚ್ಚು ಗಮನ ಹರಿಸಬೇಕು. ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ದೇಹವನ್ನು ಆರೋಗ್ಯರವಾಗಿಟ್ಟುಕೊಳ್ಳಲು ಸಹಾಯಕವಾಗಿದೆ.

    ಈ ಕಾಂಗ್ರೆಸ್ ನವರು ಎಲ್ಲ ಗ್ಯಾರಂಟಿ ಕೊಟ್ಟರು, ಪ್ರಾಣದ ಗ್ಯಾರಂಟಿ ಕೊಡ್ತಿಲ್ಲ: ಶೋಭಾ ಕರಂದ್ಲಾಜೆ!

    ಕ್ಯಾರೆಟ್ ನಮ್ಮ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೊಡುವಂತಹ ತರಕಾರಿ ಯಾಗಿದೆ. ಕೇವಲ ಅಡುಗೆಯಲ್ಲಿ ಮಾತ್ರವಲ್ಲ, ಕ್ಯಾರೆಟ್ ಹಲ್ವಾ, ಕ್ಯಾರೆಟ್ ಸೂಪ್, ಕ್ಯಾರೆಟ್ ಪಲ್ಯ, ಕ್ಯಾರೆಟ್ ಪಾಯಸ ಹೀಗೆ ಹಲವಾರು ವಿಧಗಳಲ್ಲಿ ನಾವು ಕ್ಯಾರೆಟ್ ಸೇವನೆಯ ಬಗ್ಗೆ ಆಲೋಚನೆ ಮಾಡಬಹುದು.

    ಕ್ಯಾರೆಟ್ ನಲ್ಲಿ ನಮ್ಮ ದೇಹಕ್ಕೆ ಅಗತ್ಯ ಎನಿಸುವ ಅದ್ಭುತ ಆರೋಗ್ಯ ಲಕ್ಷಣಗಳು ಸಿಗುತ್ತವೆ. ಅಪಾರ ಪ್ರಮಾಣದ ವಿಟಮಿನ್, ಖನಿಜಾಂಶಗಳು ಇದರಲ್ಲಿವೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ ಬನ್ನಿ…

    ಕ್ಯಾರೆಟ್ ತನ್ನಲ್ಲಿ ಅಪಾರ ಪ್ರಮಾಣದ ವಿಟಮಿನ್ ಅಂಶಗಳನ್ನು ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಒಳಗೊಂಡಿದೆ. ಆರೋಗ್ಯ ತಜ್ಞರಾದ ಲವ್ನೀತ್ ಬತ್ರ ಹೇಳುವ ಹಾಗೆ ಕ್ಯಾರೆಟ್ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಅಂಶಗಳನ್ನು ತನ್ನಲ್ಲಿ ಅಪಾರ ಪ್ರಮಾಣವಾಗಿ ಹೊಂದಿದೆ.
    ಇದು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡವನ್ನು ತಡೆಯುತ್ತದೆ ಮತ್ತು ನಮ್ಮ ದೇಹವನ್ನು ಕ್ಯಾನ್ಸರ್ ಕಾರಕ ಜೀವಕೋಶಗಳಿಂದ ರಕ್ಷಣೆ ಮಾಡುತ್ತದೆ. ವಿಶೇಷವಾಗಿ ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಸಮಸ್ಯೆಯನ್ನು ಇದು ಹೋಗಲಾಡಿಸುತ್ತದೆ.

    ಕ್ಯಾರೆಟ್ ಪ್ರಮುಖವಾಗಿ ವಸಡುಗಳು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹುಳುಕು ಹಲ್ಲು ಉಂಟಾಗದಂತೆ ಹಲ್ಲುಗಳನ್ನು ರಕ್ಷಣೆ ಮಾಡುತ್ತದೆ.
    ಕ್ಯಾರೆಟ್ ನಲ್ಲಿ ಕಂಡುಬರುವಂತಹ ಖನಿಜಾಂಶಗಳು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಗಳ ಕಾರ್ಯ ಚಟುವಟಿಕೆಯನ್ನು ತಡೆಯುವ ಶಕ್ತಿ ಪಡೆದಿದೆ.

    ಕ್ಯಾರೆಟ್ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯ ಆರೋಗ್ಯ ಉತ್ತಮಗೊಳ್ಳುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣ ಅಪಾರ ಪ್ರಮಾಣದಲ್ಲಿದ್ದು, ಇದೊಂದು ಬಜೆಟ್ ಫ್ರೆಂಡ್ಲಿ ಆಗಿರುವುದರಿಂದ ಹೊಳಪಿನ ತ್ವಚೆಗೆ ಫೇಸ್ ಮಾಸ್ಕ್ ತರಹ ಕೂಡ ಇದನ್ನು ಉಪಯೋಗಿಸ ಬಹುದು. ಇದಕ್ಕಾಗಿ ತುರಿದ ಕ್ಯಾರೆಟ್ ಮತ್ತು ಸ್ವಲ್ಪ ಜೇನುತುಪ್ಪ ಮಿಶ್ರಣ ಮಾಡಿ ಫೇಸ್ ಮಾಸ್ಕ್ ತರಹ ಬಳಸಿ.

    ಕ್ಯಾರೆಟ್ ತನ್ನಲ್ಲಿ ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಪ್ರಮಾಣವನ್ನು ಹೆಚ್ಚಾಗಿ ಹೊಂದಿರುವು ದರಿಂದ ಮೂಳೆಗಳ ಆರೋಗ್ಯಕ್ಕೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ ಮತ್ತು ಮುಂಬರುವ ದಿನ ಗಳಲ್ಲಿ ಮೂಳೆಗಳ ತೊಂದರೆ ಕಂಡು ಬರದಂತೆ ನೋಡಿಕೊಳ್ಳುತ್ತದೆ.

    ಕ್ಯಾರೆಟ್ ಒಂದು ಆಂಟಿ ಇಂಫ್ಲಮೇಟರಿ ಗುಣಲಕ್ಷಣ ಪಡೆದಿರುವ ತರಕಾರಿಯಾಗಿದ್ದು, ರಕ್ತನಾಳಗಳ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.
    ಇದರಿಂದ ಹೃದಯದ ಮೇಲಿನ ಒತ್ತಡ ಸಹ ಕಡಿಮೆಯಾಗುತ್ತದೆ. ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಅನುಕೂಲಕಾರಿ. ತಮ್ಮ ಆಹಾರ ಪದ್ಧತಿಯಲ್ಲಿ ಕ್ಯಾರೆಟ್ ಬಳಕೆ ಅಧಿಕ ಲಾಭಗಳನ್ನು ಕೊಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    Demo
    Share. Facebook Twitter LinkedIn Email WhatsApp

    Related Posts

    Health Tips: ಮಧುಮೇಹಿಗಳು ತಿನ್ನಲೇಬೇಕು ಈ ತರಕಾರಿ: ಏಕಾಏಕಿ ಕಂಟ್ರೋಲ್’ಗೆ ಬರುತ್ತೆ ಶುಗರ್

    May 31, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂತಿದ್ದೀರಾ!? ಹಾಗಿದ್ರೆ ಇಷ್ಟೆಲ್ಲಾ ಬೆನಿಫಿಟ್ ಗ್ಯಾರಂಟಿ!

    May 30, 2025

    ನಿಮ್ಮ ಮೂತ್ರದಲ್ಲಿ ಹೆಚ್ಚು ವಾಸನೆ ಬರ್ತಿದ್ಯಾ!? ಹಾಗಿದ್ರೆ ಇದು ಈ ಕಾಯಿಲೆಯ ಮುನ್ಸೂಚನೆ!

    May 30, 2025

    ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯದಿರಿ: ಕಹಿಯಾದ್ರೂ ಇದರ ರಸದಲ್ಲಿ ಅಡಗಿದೆ ಆರೋಗ್ಯ ಸಿಹಿ!

    May 30, 2025

    ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!

    May 29, 2025

    ನೀವು ನಿತ್ಯ ಮೊಸರು ತಿನ್ನುತ್ತಿದ್ದೀರಾ!? ಹಾಗಿದ್ರೆ ದೇಹದ ಮೇಲಾಗುವ ಪರಿಣಾಮದ ಬಗ್ಗೆ ತಿಳಿಯಿರಿ

    May 28, 2025

    ಸೈಟ್ ರಿಜಿಸ್ಟರ್ ಆಗದೇ ಪರದಾಡುತ್ತಿದ್ದೀರಾ!? ನಿಮಗಿಲ್ಲಿದೆ ಗುಡ್ ನ್ಯೂಸ್!

    May 28, 2025

    ನಿಮಗಿದು ಗೊತ್ತಾ!? ಪ್ರತಿಯೊಬ್ಬರೂ ಮೊಳಕೆ ಬರಿಸಿದ ಹೆಸರುಕಾಳನ್ನು ತಿನ್ನಲೇಬೇಕಂತೆ! ಯಾಕೆ?

    May 28, 2025

    ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿದ್ದೀರಾ!? ಹಾಗಿದ್ರೆ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಚಮತ್ಕಾರ ಗ್ಯಾರಂಟಿ!

    May 28, 2025

    ನಿತ್ಯವೂ ಚಿಯಾ ಬೀಜಗಳು ಮತ್ತು ನಿಂಬೆ ಜ್ಯೂಸ್ ಕುಡಿದರೆ ಏನಾಗುತ್ತೆ?

    May 27, 2025

    ನಿತ್ಯ ಬೆಳಗ್ಗೆ ಕಾಫಿ, ಚಹಾ ಕುಡಿಯೋ ಮುನ್ನ ಒಂದು ಗ್ಲಾಸ್ ನೀರು ಕುಡಿಯಿರಿ!

    May 27, 2025

    ಇಡ್ಲಿ- ದೋಸೆ ಹಿಟ್ಟು ಹುಳಿ ಆಗುವುದನ್ನು ತಡೆಯಲು ಈ ಟಿಪ್ಸ್ ಫಾಲೋ ಮಾಡಿ!

    May 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.