ನವದೆಹಲಿ: ಭವಿಶ್ ಅಗರ್ವಾಲ್ ನೇತೃತ್ವದ ಓಲಾದ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಅಂಗವಾದ ಓಲಾ ಎಲೆಕ್ಟ್ರಿಕ್, ಹೆಚ್ಚುತ್ತಿರುವ ನಷ್ಟವನ್ನು ತಡೆಯುವ ಪುನರ್ರಚನೆ ಪ್ರಯತ್ನಗಳ ಭಾಗವಾಗಿ 1,000 ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ವಜಾಗೊಳಿಸುವಿಕೆಯು ಪ್ರಾಥಮಿಕವಾಗಿ ದೇಶಾದ್ಯಂತದ ಶೋರೂಮ್‌ಗಳು ಮತ್ತು ಸೇವಾ ಕೇಂದ್ರಗಳಲ್ಲಿನ ಮಾರಾಟ, ಸೇವೆ ಮತ್ತು ಗೋದಾಮಿನ ಪಾತ್ರಗಳಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.
ಉದ್ಯೋಗ ಕಡಿತದ ಬೆನ್ನಲ್ಲೇ ಸೋಮವಾರ ಓಲಾ ಎಲೆಕ್ಟ್ರಿಕ್ ಷೇರುಗಳ ಮೌಲ್ಯ ಇಂದು ಶೇ.2.94 ರಷ್ಟು ಕುಸಿದಿದ್ದು ಅಂತಿಮವಾಗಿ 55.18 ರೂ.ನಲ್ಲಿ ವ್ಯವಹಾರ ಕೊನೆಗೊಳಿಸಿತು. 2022ರ ನವೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್ ಅಂದಾಜು 500 ಉದ್ಯೋಗಿಗಳನ್ನು ವಜಾ ಮಾಡಿತ್ತು. 2024ರ ಮಾರ್ಚ್‌ನಲ್ಲಿ 4,000 ಉದ್ಯೋಗಿಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನವರು ಕೆಲಸದಿಂದ ವಜಾಗೊಂಡಿದ್ದರು. ಆದರೆ ಗುತ್ತಿಗೆ ಆಧಾರಿತ ಕಾರ್ಮಿಕರ ಹೆಸರನ್ನು ಸೇರಿಸಿರದ ಕಾರಣ, ಎಷ್ಟು ಮಂದಿ ಉದ್ಯೋಗಿಗಳು ವಜಾ ಆಗಲಿದ್ದಾರೆ ಎನ್ನುವುದು ಮಾಹಿತಿಯಲ್ಲಿ ಇನ್ನೂ ಸ್ಪಷ್ಟವಾಗಿಲ್ಲ.
ನೀವು ಪ್ರತಿದಿನ ಮೊಸರು ತಿನ್ನುತ್ತೀರಾ..? ಹಾಗಾದ್ರೆ ನೀವು ಈ ವಿಷಯಗಳನ್ನು ಮೊದಲು ತಿಳಿದುಕೊಳ್ಳಲೇಬೇಕು!
ಪುನರ್‌ರಚನೆಯ ಸಲುವಾಗಿ ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕ ಸೇವಾ ಕಾರ್ಯಾಚರಣೆಗಳ ಕೆಲವು ಭಾಗಗಳನ್ನು ಸ್ವಯಂಚಾಲಿತಗೊಳಿಸುತ್ತಿದೆ. ಇದು ವೆಚ್ಚವನ್ನು ಕಡಿಮೆ ಮಾಡುವ ಮತ್ತು ಗ್ರಾಹಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ವರದಿಗೆ ಪ್ರತಿಕ್ರಿಯಿಸಿದ ಓಲಾ ವಕ್ತಾರರೊಬ್ಬರು, ಲಾಭ, ಕಡಿಮೆ ವೆಚ್ಚ ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಭವಗಳನ್ನು ನೀಡುವ ಸಲುವಾಗಿ ನಾವು ಗ್ರಾಹಕ ಸೇವೆಯನ್ನು ಪುನರ್‌ರಚನೆ, ಸ್ವಯಂಚಾಲಿತಗೊಳಿಸುತ್ತಿದ್ದೇವೆ. ಅಲ್ಲದೇ ಉತ್ತಮ ಉತ್ಪಾದಕತೆಗಾಗಿ ಅನಗತ್ಯ ಹುದ್ದೆಗಳನ್ನು ತೆಗೆದು ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. ಕಂಪನಿಯು ತನ್ನ ಶೋ ರೂಂಗಳು ಮತ್ತು ಸೇವಾ ಕೇಂದ್ರಗಳಲ್ಲಿ ಮಾರಾಟ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.