ಬೆಂಗಳೂರು: ಬಾರ್ ಒಳಗೆ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಕೇಸ್ ಗೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ಮೂವರನ್ನು ಬಂಧಿಸಲಾಗಿದೆ. ಗಿರೀಶ್, ಭರತ್, ಮೋಹನ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳು ಮತ್ತು ಹಲ್ಲೆಗೊಳಗಾದವರು ಪರಿಚಿತರಾಗಿದ್ದು, ಹಲ್ಲೆಗೊಳಗಾದವರು ಆರೋಪಿ ಮೋಹನ್ ಗೆ ಕರೆ ಮಾಡಿ ಅವಾಜ್ ಹಾಕಿದ್ರು.
ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗಿ: ಜೀವನದಲ್ಲಿ ಅನಿರೀಕ್ಷಿತ ಅದೃಷ್ಟ ನಿಮ್ಮದಾಗುತ್ತೆ.!
ಹಿಂದೆ ದಾಖಲಾಗಿದ್ದ ದೂರು ಸಂಬಂಧ ಕರೆ ಮಾಡಿ ಅವಾಜ್ ಹಾಕಲಾಗಿದ್ದು, ಧೈರ್ಯ ಇದ್ರೆ ಮೀಟ್ ಆಗು ಅಂತ ಪ್ರಚೋದಿಸಿದ್ರು. ಇದ್ರಿಂದ ಕೋಪಗೊಂಡ ಮೋಹನ್ ಇನ್ನಿಬ್ಬರ ಜೊತೆ ಹೋಗಿ ಬಾರ್ ನಲ್ಲಿ ಕೂತಿದ್ದ ವಂಶಿ & ಪವನ್ ಮೇಲೆ ಹಲ್ಲೆ ಮಾಡಿದ್ರು. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.