ಕೋಲಾರ : ಸಾರ್ವಜನಿಕರಿಗೆ ಕಮೀಷನ್ ಆಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ಅಪರಾಧಕ್ಕೆ ಬಳಕೆ ಮಾಡುತ್ತಿದ್ದ ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಮ್ಮಿರಿ ರಾಜ್ ಕುಮಾರ್, ಕೊಡಾ ಸುರೇಶ್, ಅಖಿಲ್ ಶೇಖ್ ಅಬೀದ್ ಪಾಷ ಬಂಧಿತ ಆರೋಪಿಗಳಾಗಿದ್ದು, ಇವರು ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಕೋಲಾರ ಜಿಲ್ಲೆ ಮತ್ತು ದೇಶದ ಇತರೆ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ವಿವಿಧ ಆಮಿಷ ಒಡ್ಡಿ ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆಸಿ ಸೈಬರ್ ವಂಚಕರೊಂದಿಗೆ ಕೈಜೋಡಿಸಿ ಈ ಬ್ಯಾಂಕ್ ಖಾತೆಗಳನ್ನು ಸೈಬರ್ ಅಪರಾಧಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು.
ನ್ಯಾಯಾಲಯದ ಜಪ್ತಿ ಆದೇಶ ಬಳಿಕ ಕಾರು ಸರ್ವೀಸ್‌ಗೆ ಬಿಟ್ಟ ಡಿಸಿ ; ಏನಿದರ ಮರ್ಮ..?
ಮೂವರು ಆರೋಪಿಗಳು ಆಂಧ್ರಪ್ರದೇಶದವರಾಗಿದ್ದು, ಬಂಧಿತರಿಂದ 137 ವಿವಿಧ ಬ್ಯಾಂಕ್ ಗಳ ಎಟಿಎಂ ಕಾರ್ಡ್‌ಗಳು, 21 ಬ್ಯಾಂಕ್ ಪಾಸ್ ಬುಕ್ ಗಳು, 10 ಚೆಕ್ ಬುಕ್ ಗಳು 3 ಸಿಮ್ ಕಾರ್ಡ್‌ಗಳು ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಬಿ. ನಿಖಿಲ್ ತಿಳಿಸಿದ್ದಾರೆ.