ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ರೋಚಕವಾಗಿತ್ತು. ಒಂದು ರೀತಿ ಪಂದ್ಯ ಸೋಲತ್ತೆ ಎಂದು ಕೊಂಡಿದ್ದ ಆರ್ ಸಿಬಿಗೆ 19ನೇ ಓವರ್ ಪಂದ್ಯದ ಚಿತ್ರಣ ಬದಲಿಸಿತು.
ಪಹಲ್ಗಾಮ್ ದಾಳಿ ಬೆನ್ನಲ್ಲೇ ಗಡಿಯಲ್ಲಿ ಭಾರತ-ಪಾಕ್ ಮಧ್ಯೆ ಗುಂಡಿನ ಚಕಮಕಿ!
ಟಾಸ್ ಸೋತರೂ ಪಂದ್ಯದ ಫಲಿತಾಂಶವನ್ನು ಬದಲಿಸುವಲ್ಲಿ ಯಶಸ್ವಿಯಾದ ಆರ್ಸಿಬಿ ತನ್ನ ಸಾಂಘಿಕ ಪ್ರದರ್ಶನದಿಂದ ತವರಿನಲ್ಲಿ ಸತತ ಮೂರು ಪಂದ್ಯಗಳ ಸೋಲಿನ ಸರಣಿಗೆ ಬ್ರೇಕ್ ಹಾಕಿತು. ಈ ಪಂದ್ಯದಲ್ಲಿ ಮತ್ತೊಮ್ಮೆ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅದ್ಭುತ ಅರ್ಧಶತಕಗಳ ಆಧಾರದ ಮೇಲೆ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಇದು ಈ ತಂಡದ ವಿರುದ್ಧ ಆರ್ಸಿಬಿ ಗಳಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ರಾಜಸ್ಥಾನ್ ನಿಗದಿತ ಓವರ್ಗಳಲ್ಲಿ ಒಂಬತ್ತು ವಿಕೆಟ್ಗಳ ನಷ್ಟಕ್ಕೆ 194 ರನ್ ಗಳಿಸಲಷ್ಟೇ ಶಕ್ತವಾಯಿತು. ವಾಸ್ತವವಾಗಿ ರಾಜಸ್ಥಾನ್ ಇನ್ನಿಂಗ್ಸ್ನ ಮೊದಲಾರ್ಧದಲ್ಲಿ ಗೆಲುವಿನ ಫೇವರೇಟ್ ಎನಿಸಿಕೊಂಡಿತ್ತು. ಆದರೆ ಆ ಬಳಿಕ ಕರಾರುವಕ್ಕಾದ ದಾಳಿ ನಡೆಸಿದ ಆರ್ಸಿಬಿ ಬೌಲರ್ಗಳು ತಂಡಕ್ಕೆ ಗೆಲುವು ತಂದುಕೊಟ್ಟರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದರ್ ಕೂಡ ಈ ಗೆಲುವಿನ ಕ್ರೆಡಿಟ್ ನಮ್ಮ ಬೌಲರ್ಗಳಿಗೆ ಸಲ್ಲುತ್ತದೆ ಎಂದರು. ಮುಂದುವರೆದು ಮಾತನಾಡಿದ ಅವರು, ‘ಈ ಗೆಲುವು ನಮಗೆ ತುಂಬಾ ಅಗತ್ಯವಾದ ಗೆಲುವಾಗಿತ್ತು. ಇಂದು ಸಹ ವಿಕೆಟ್ ನಾವು ನಿರೀಕ್ಷಿಸಿದಂತೆ ವಿಭಿನ್ನವಾಗಿತ್ತು. ಆದಾಗ್ಯೂ ರಾಜಸ್ಥಾನ್ ಇನ್ನಿಂಗ್ಸ್ನ 10 ನೇ ಓವರ್ ನಂತರ ನಮ್ಮ ಬೌಲರ್ಗಳು ಲಯಕಂಡುಕೊಂಡಿದ್ದು ಅದ್ಭುತವಾಗಿತ್ತು. ಹೀಗಾಗಿ ಈ ಗೆಲುವಿನ ಎಲ್ಲಾ ಕ್ರೆಡಿಟ್ ನಮ್ಮ ಬೌಲರ್ಗಳಿಗೆ ಸಲ್ಲುತ್ತದೆ. ಅವರು ಧೈರ್ಯ ತೋರಿಸಿದ ರೀತಿ ಅದ್ಭುತವಾಗಿತ್ತು.
205 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ಗೆ ಆರಂಭಿಕರು ಉತ್ತಮ ಆರಂಭ ಒದಗಿಸಿಕೊಟ್ಟರು. ಅವರ ಹೊಡಿಬಡಿ ಆಟದಿಂದಾಗಿ ಆರ್ಸಿಬಿ ಸ್ವಲ್ಪ ಒತ್ತಡದಲ್ಲಿತ್ತು. ಆದರೆ ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಪಡೆಯುವ ಮೂಲಕ ಆರ್ಸಿಬಿ, ಎದುರಾಳಿ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಲು ಸಹಾಯವಾಯಿತು ಎಂದರು. ಈ ಗೆಲುವಿನ ಹೊರತಾಗಿಯೂ ರಾಜಸ್ಥಾನ್ ತಂಡದ ಆರಂಭಿಕರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಜತ್, ಆರಂಭದಲ್ಲಿ ರಾಜಸ್ಥಾನ್ ಸುಂದರವಾಗಿ ಬ್ಯಾಟಿಂಗ್ ಮಾಡಿತು, ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ.