ಜ್ಯೋತಿಷ್ಯದಂತೆಯೇ, ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಮ್ಮ ಬಟ್ಟೆಯಿಂದ ಪ್ರಾರಂಭಿಸಿ ನಾವು ಮನೆಯಲ್ಲಿ ಬಳಸುವ ವಸ್ತುಗಳು, ಯಾವಾಗ ಖರೀದಿಸಬೇಕು, ಹೇಗೆ ಮಾರಾಟ ಮಾಡಬೇಕು, ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಇಡಬಾರದು, ಎಲ್ಲವನ್ನೂ ವಾಸ್ತುದಲ್ಲಿ ಹೇಳಲಾಗಿದೆ.. ಅದೇ ಸಮಯದಲ್ಲಿ ನಿಮಗೆ ದಾನ ಮಾಡುವ ಅಭ್ಯಾಸವಿದ್ದರೆ.. ನಿಮ್ಮಲ್ಲಿರುವ ಎಲ್ಲವನ್ನೂ ಹುಚ್ಚಾಟಿಕೆಗೆ ಬಿಟ್ಟುಕೊಡಬೇಡಿ. ಅದರಲ್ಲಿ ಏನನ್ನು ಕೊಡಬೇಕು ಮತ್ತು ಏನನ್ನು ಕೊಡಬಾರದು ಎಂಬುದನ್ನೂ ಮೊದಲು ತಿಳಿಬೇಕು.. ದಾನ ಮಾಡುವ ಉದ್ದೇಶ ಸರಿ.. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಅನುಸರಿಸಬೇಕು. ಅದೇ ರೀತಿ ಹಳೆ ಬಟ್ಟೆ ಕೊಡುವ ಮುನ್ನ ಶಾಸ್ತ್ರದಲ್ಲಿ ಹೇಳಿರುವ ಈ ಮಾತುಗಳನ್ನು ಅನುಸರಿಸಿ.
ಕುಂಬಳಕಾಯಿ ಸೇವನೆಯಿಂದ ಸಿಗುತ್ತೆ ಆರೋಗ್ಯಕ್ಕೆ ಸಖತ್ ಲಾಭ; ಕೇಳಿದ್ರೆ ನೀವೆ ಶಾಕ್ ಆಗ್ತೀರಿ!
ಹೊಸ ಬಟ್ಟೆಗಳನ್ನು ದೀರ್ಘಕಾಲದವರೆಗೆ ಧರಿಸಿದ ನಂತರ ಅವು ಹಳೆಯದಾಗುತ್ತದೆ. ಇನ್ನೂ ಚಿಕ್ಕ ಮಕ್ಕಳಿಗೆ ಖರೀದಿಸಿದ ಬಟ್ಟೆಗಳು ಅವರು ದೊಡ್ಡವರಾಗುತ್ತಿದ್ದಂತೆ ಚಿಕ್ಕದಾಗುತ್ತಾ ಹೋಗುತ್ತದೆ. ನಂತರ ಇಂತಹ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಕೆಲವರು ಹಳೆ ಬಟ್ಟೆಗಳನ್ನು ಬೀದಿಯಲ್ಲಿ ಅಥವಾ ಕಸದಲ್ಲಿ ಎಸೆಯುತ್ತಾರೆ. ಕೆಲವರು ತಮ್ಮ ಹಳೆಯ ಬಟ್ಟೆಗಳನ್ನು ಬೇರೆಯವರಿಗೆ ಕೊಡುತ್ತಾರೆ. ಇನ್ನೂ ಕೆಲವರು ಮನೆಯನ್ನು ಸ್ವಚ್ಛಗೊಳಿಸಲು ಹಳೆಯ ಬಟ್ಟೆಗಳನ್ನು ಸಹ ಬಳಸುತ್ತಾರೆ. ಇನ್ನೂ ಕೆಲವೆಡೆ ಹಳೆ ಸೀರೆ ಅಥವಾ ಬಟ್ಟೆ ಇರುವ ಪಾತ್ರೆ, ಬಕೆಟ್ ಖರೀದಿಸುವ ಟ್ರೆಂಡ್ ಇದೆ. ಆದರೆ ಹಳೆಯ ಬಟ್ಟೆಗಳನ್ನು ಬಿಸಾಡುವ ಈ ಅಭ್ಯಾಸ ಒಳ್ಳೆಯದೇ? ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ನೀವು ನಿಮ್ಮ ಬಟ್ಟೆಗಳನ್ನು ಎಸೆಯುವ, ಮಾರಾಟ ಮಾಡುವ ಅಥವಾ ಬೇರೆಯವರಿಗೆ ಕೊಡುವ ಅಭ್ಯಾಸ ಬಿಟ್ಟುಬಿಡಬೇಕು. ಆದರೂ ಕೂಡ ನಿಮಗೆ ಹಳೆ ಬಟ್ಟೆಗಳನ್ನು ಮನೆಯಲ್ಲಿ ಇಡಲು ಜಾಗವಿಲ್ಲ ಅಥವಾ ತೊಂದರೆಯಾಗುತ್ತಿದ್ದರೆ, ಅದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ರೂಢಿಸಿಕೊಳ್ಳುವುದು ಅಗತ್ಯ.
ಹಳೆಯ ಬಟ್ಟೆಗಳನ್ನು ಕೊಡಲು ನೀವು ಯೋಚಿಸುತ್ತಿದ್ದರೆ ಅದನ್ನು ಮೊದಲು ಉಪ್ಪು ನೀರಿನಲ್ಲಿ ಚೆನ್ನಾಗಿ ನೆನೆಸಿಡಿ. ಮೂರು ಬಾರಿ ಬಟ್ಟೆಯನ್ನು ಸ್ವಚ್ಛಗೊಳಿಸಿ ನೀವು ದಾನ ಮಾಡಿದ್ರೆ ಬಹಳ ಒಳ್ಳೆಯದು. ನಿಮ್ಮ ಪ್ರಭೆ, ಶಕ್ತಿ ಬಟ್ಟೆಯಲ್ಲಿ ಇರದಂತೆ ನೀವು ನೋಡಿಕೊಳ್ಳಬೇಕಾಗುತ್ತದೆ.
ಇದಲ್ಲದೇ ಬಟ್ಟೆಗಳನ್ನು ಕೊಡುವಾಗ ಉಚಿತವಾಗಿ ನೀಡಬೇಡಿ. ಬಟ್ಟೆ ಕೊಟ್ಟ ನಂತರ ಅವರಿಂದ ಕನಿಷ್ಠ 1 ರೂಪಾಯಿ ತೆಗೆದುಕೊಳ್ಳಿ. ಇದಲ್ಲದೇ ಬಟ್ಟೆ ಯಾರೂ ತೆಗೆದುಕೊಳ್ಳದಿದ್ದರೆ, ಅದನ್ನು ಕಸದ ತೊಟ್ಟಿಗೆ ಎಸೆಯಬೇಡಿ, ಬದಲಾಗಿ ನೀರಿಗೆ ಬಿಡಿ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಇನ್ನೂ ಕೆಲವರಿಗೆ ಹಳೆಯ ಬಟ್ಟೆಗಳನ್ನು ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಅಭ್ಯಾಸವಿದೆ. ಅಡುಗೆ ಕೋಣೆಯಲ್ಲಿ ಅಥವಾ ನೆಲ ಒರೆಸಲು ಕೆಲವರು ಹಳೆಯ ಬಟ್ಟೆಯನ್ನು ಬಳಸುತ್ತಾರೆ. ಆದರೆ ಇಂತಹ ಅಭ್ಯಾಸ ಮನೆಗೆ ಒಳ್ಳೆಯದಲ್ಲ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.