Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹುಲಿ ದಾಳಿ: ಮಹಿಳೆ ಸಾವು.. ಸಂತಾಪ ಸೂಚಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ!

    By AIN AuthorJune 10, 2025
    Share
    Facebook Twitter LinkedIn Pinterest Email
    Demo

    ಚಾಮರಾಜನಗರ:-ಒಂದೇ ದಿನ ಎರಡು ಕಡೆ ಇಬ್ಬರ ಮೇಲೆ ಹುಲಿ ದಾಳಿ ಮಾಡಿ ಓರ್ವ ಮಹಿಳೆಯನ್ನು ಬಲಿ ಪಡೆದಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಮಂಗಳವಾರ ನಡೆದಿದೆ. ಚಾಮರಾಜನಗರ ಜಿಲ್ಲೆಯ ಬೇಡಗುಳಿಯ ರಂಗಮ್ಮ ಎಂಬ ವೃದ್ಧೆ ಹುಲಿ ದಾಳಿಗೆ ಅಸುನೀಗಿದ್ದಾರೆ. ಇದೇ ವೇಳೆ ರಾಮಯ್ಯನಪೋಡು ನಿವಾಸಿ ರವಿ(35) ತೀವ್ರವಾಗಿ ಗಾಯಗೊಂಡು ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅನುದಾನ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ: ವಿಶ್ವೇಶ್ವರ ಹೆಗಡೆ!

    ರಂಗಮ್ಮ ಎಂಬುವರ ಮೇಲೆ ಇಂದು ಬೆಳಗ್ಗೆ ಹುಲಿ ದಾಳಿ ಮಾಡಿದ್ದು ತಲೆ ಮತ್ತು ಹೊಟ್ಟೆ ಭಾಗವನ್ನು ತಿಂದಿತ್ತು. ಇದಕ್ಕೂ ಮುನ್ನ, ಸೋಮವಾರ ರಾತ್ರಿ ಬಹಿರ್ದೆಸೆಗೆಂದು ಬಂದಿದ್ದ ರಾಮಯ್ಯನಪೋಡಿನ ನಿವಾಸಿ ರವಿ(35) ಎಂಬಾತನ ಮೇಲೆ ಹುಲಿ ದಾಳಿ ನಡೆಸಿ ಗಂಭೀರವಾದ ಗಾಯಗೊಳಿಸಿತ್ತು. ಹುಲಿ ದಾಳಿ ವೇಳೆ ರವಿ ಮತ್ತು ಸಂಬಂಧಿಕರ ಕಿರುಚಾಟಕ್ಕೆ ಹುಲಿ ಓಡಿ ಹೋಗಿತ್ತು. ಸದ್ಯ ರವಿ ಅವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ.

    ಇಂದು ಬೆಳಗ್ಗೆ ಕೂಡ ಬೇಡಗುಳಿಯ ರಂಗಮ್ಮ ಎಂಬ ವೃದ್ಧೆ ಮೇಲೆ ಹುಲಿ ದಾಳಿ ಮಾಡಿದ್ದರಿಂದ ರಂಗಮ್ಮ ಮೃತಪಟ್ಟಿದ್ದಾರೆ. ನಿನ್ನೆ ಸೋಮವಾರ ರಾತ್ರಿ ಸಂಬಂಧಿಕರ ಮನೆಗೆ ಹೋಗಿದ್ದ ರವಿಯು ಬಹಿರ್ದೆಸೆಗೆಂದು ಹೊರಕ್ಕೆ ಹೋದ ವೇಳೆ ಹುಲಿ ದಾಳಿ ಮಾಡಿದೆ. ಇದನ್ನು, ಗಮನಿಸಿದ ಸಂಬಂಧಿಕರು ಕೂಗಾಡಿ- ಕಿರುಚಾಡಿ ಹುಲಿಯನ್ನು ಓಡಿಸಿದ್ದರು, ಕಳೆದ 1 ತಿಂಗಳಿನಿಂದ ಹುಲಿ ಓಡಾಟವಿತ್ತು ಎಂದು ಹೇಳಲಾಗುತ್ತಿದೆ.

    ಹುಲಿ ದಾಳಿಯ ಮಾಹಿತಿಯಿಂದ ಎಚ್ಚೆತ್ತ ಬಿಆರ್​ಟಿ ಅರಣ್ಯಾಧಿಕಾರಿಗಳು, ಭೀಮ ಮತ್ತು ಗಜೇಂದ್ರ ಎಂಬ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿ ಬಲಿ ಪಡೆದ ಅಪಾಯಕಾರ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ!

    ಚಾಮರಾಜನಗರ ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ (55) ಮೃತಪಟ್ಟಿರುವ ಬಗ್ಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ನಿನ್ನೆ ರಾತ್ರಿ ಇದೇ ಹಾಡಿಯಲ್ಲಿ ರವಿ ಎಂಬುವವರ ಮೇಲೆ ಹುಲಿ ದಾಳಿ ಮಾಡಿತ್ತು, ರವಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಇಂದು ಬೆಳಗ್ಗೆ ಮಹಿಳೆ ರಂಗಮ್ಮ ಬಹಿರ್ದೆಸೆಗೆ ಹೋಗಿದ್ದಾಗ ಹುಲಿ ದಾಳಿ ಮಾಡಿದ್ದು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಮನುಷ್ಯರ ರಕ್ತದ ರುಚಿ ಕಂಡ ಹುಲಿ ಅಪಾಯಕಾರಿ, ಹೀಗಾಗಿ ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹುಲಿಯನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.

    ಹುಲಿ ದಾಳಿಯಿಂದ ಗಾಯಗೊಂಡಿರುವ ರವಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿರುವ ಸಚಿವರು, ಮೃತ ರಂಗಮ್ಮ ಅವರ ಕುಟುಂಬದ ಸದಸ್ಯರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
    ರವಿ ಅವರ ಚಿಕಿತ್ಸಾ ವೆಚ್ಚ ಭರಿಸಲು ಮತ್ತು ಮೃತರ ಹತ್ತಿರದ ಬಂಧುಗಳಿಗೆ ಪರಿಹಾರದ ಮೊತ್ತ ವಿತರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿರುವ ಈಶ್ವರ ಖಂಡ್ರೆ, ಕಾಡಿನಂಚಿನ ಜನರು ರಾತ್ರಿಯ ವೇಳೆ ಮತ್ತು ಮುಂಜಾನೆ ವನ ಪ್ರದೇಶದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

    June 11, 2025

    ಹುಬ್ಬಳ್ಳಿಯಲ್ಲಿ ಭಾರೀ ಮಳೆ: ಹಳ್ಳದ ನೀರಿನ ನಡುವೆ ಕೂಲಿಕಾರ್ಮಿಕರು!

    June 11, 2025

    ವಿಧಾನಸೌಧದಲ್ಲಿ ನಡೆದ RCB ಅಭಿನಂದನಾ ಸಮಾರಂಭದಲ್ಲಿ ರಾಜ್ಯಪಾಲರನ್ನು ನಾನೇ ಆಹ್ವಾನಿಸಿದ್ದೆ: CM ಸಿದ್ದರಾಮಯ್ಯ!

    June 11, 2025

    ನಾನು ಶಾಸಕನಾಗಿ ಸುಳ್ಳು ಹೇಳಲು ಆಗಲ್ಲ: ಹೆಚ್ ಡಿ ರೇವಣ್ಣ ಹಿಂಗೇಳಿದ್ಯಾಕೆ?

    June 11, 2025

    ಹುಬ್ಬಳ್ಳಿಯಲ್ಲಿ ಭಾರೀ ಮಳೆ: ಸವಾರರು ಪರದಾಟ.. ಜನಜೀವನ ಅಸ್ತವ್ಯಸ್ತ!

    June 11, 2025

    ವಿಧಾನಸೌಧದಲ್ಲಿ ನಡೆದ RCB ಆಟಗಾರರ ಸನ್ಮಾನ ಸಮಾರಂಭಕ್ಕೆ ರಾಜ್ಯಪಾಲರನ್ನು ನಾನೇ ಆಹ್ವಾನಿಸಿದ್ದೆ: ಸಿದ್ದರಾಮಯ್ಯ

    June 11, 2025

    yathindra siddaramaiah: ಅಲುಗಾಡುತ್ತಿದೆಯಾ ಸಿಎಂ ಸಿದ್ದು ಕುರ್ಚಿ..? ಮಗ ಯತೀಂದ್ರ ಹೇಳಿದ್ದೇನು ಗೊತ್ತಾ..?

    June 11, 2025

    ತಮ್ಮ ವ್ಯವಹಾರಗಳ ಮೇಲೆ ವ್ಯಾಮೋಹ ಇರುವವರನ್ನು ಸಂಪುಟದಲ್ಲಿ ಮುಂದುವರಿಸುವ ಅಗತ್ಯವಿಲ್ಲ: ಶಿವಗಂಗಾ ಬಸವರಾಜ್

    June 11, 2025

    Instagram ನಲ್ಲಿ ಪ್ರೀತಿ, ತಿರುಪತಿಯಲ್ಲಿ ಮದುವೆ.. ಒಂದೇ ವರ್ಷಕ್ಕೆ ಹೆಂಡತಿ ಬಿಟ್ಟು, ಮೊಬೈಲ್ ಸ್ವಿಚ್ ಆಫ್ ಮಾಡಿ ಗಂಡ ಎಸ್ಕೇಪ್..!

    June 11, 2025

    Doddaballapur: ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು…!

    June 11, 2025

    ನಾನೀಗ ಅಸಹಾಯಕ ಸ್ಥಿತಿಯಲ್ಲಿದ್ದೇನೆ, ನಾಳೆ ಕೋರ್ಟ್’ಗೆ ಶರಣಾಗುತ್ತೇನೆ: ವಿನಯ್ ಕುಲಕರ್ಣಿ

    June 11, 2025

    ಗ್ರೇಟರ್ ಬೆಂಗಳೂರಿಗೆ ತುಮಕೂರು: ಸಚಿವ ಸಂಪುಟದಲ್ಲಿ ಚರ್ಚೆ – ಸಿಎಂ ಸಿದ್ದರಾಮಯ್ಯ

    June 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.