ಚಾಮರಾಜನಗರ : ಅಜ್ಜೀಪುರ ಸಫಾರಿ ಕೇಂದ್ರದ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಹುಲಿ ಕಾಣಿಸಿಕೊಂಡಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಹನೂರು ಬಫರ್ ವಲಯದ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗರಿಗೆ ಹುಲಿರಾಯ ದರ್ಶನ ನೀಡಿದ್ದಾನೆ.
ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆಯ ಹೊಣೆ ಕೇಂದ್ರದ್ದು – ಸಿಎಂ ಸಿದ್ದರಾಮಯ್ಯ
ಕಳೆದ ತಿಂಗಳು ನಿರಂತರವಾಗಿ ಬಿದ್ದ ಮಳೆಗೆ ಅರಣ್ಯವು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಸಫಾರಿಗೆ ತೆರಳುವ ವನ್ಯ ಪ್ರಿಯರಿಗೆ ಒಂದಲ್ಲ ಒಂದು ಪ್ರಾಣಿಗಳು ಕಾಣಸಿಗುತ್ತಿವೆ.ಮಲೆ ಮಹದೇಶ್ವರ ವನ್ಯಜೀವಿ ವ್ಯಾಪ್ತಿಯ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸಫಾರಿ ಕೇಂದ್ರ ಅಕ್ಟೋಬರ್ 2 2024ರಂದು ಪ್ರಾರಂಭಿಸಲಾಗಿತ್ತು. ಆದರೆ ಇದುವರೆಗೂ ಒಮ್ಮೆಯೂ ಹುಲಿರಾಯ ದರ್ಶನ ನೀಡಿರಲಿಲ್ಲ. ಇಂದು ಮೊದಲ ಬಾರಿಗೆ ಅಜ್ಜೀಪುರ ಸಫಾರಿ ಕೇಂದ್ರದಲ್ಲಿ ಹುಲಿ ಕಾಣಿಸಿಕೊಂಡಿದೆ.