ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶೈನ್ ಆಗುತ್ತಿದೆ. ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸುತ್ತಾ ಕಪ್ ಗೆಲ್ಲುವ ಉತ್ಸಾಹದಲ್ಲಿದೆ. ಆರ್ಸಿಬಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ಗೆ ಫೇಮಸ್ ಆಗಿರುವವರು ಟಿಮ್ ಡೇವಿಡ್.
ಆಸ್ಟ್ರೇಲಿಯಾದ ಟಿಮ್ ಡೇವಿಡ್ ಆರ್ಸಿಬಿಯ ಸ್ಫೋಟಕ ಬ್ಯಾಟರ್. ಕಿಂಗ್ ಕೊಹ್ಲಿ ಸ್ನೇಹಿತ ಕೂಡ. ಇವರು ಬ್ಯಾಟ್ ಹಿಡಿದು ಗ್ರೌಂಡ್ ಗೆ ಇಳಿದ್ರೆ ಸಾಕು ಸಿಕ್ಸ್ ಪೋರ್ ಗಳ ಅಬ್ಬರ..ಇಂತಹ ಅದ್ಭುತ ಬ್ಯಾಟರ್ ಕನ್ನಡದ ಸಾಹಸ ಸಿಂಗಹ ವಿಷ್ಣುವರ್ಧನ್ ಅವರ ಚಿತ್ರವೊಂದನ್ನು ವೀಕ್ಷಣೆ ಮಾಡಿರುವುದಾಗಿ ಹೇಳಿದ್ದಾರೆ.
ಡ್ಯಾನೀಶ್ ಸೇಠ್ ನಡೆಸಿಕೊಡುವ ಆರ್ ಸಿಬಿ ಇನ್ ಸೈಡ್ ಶೋನಲ್ಲಿ ಟಿಮ್ ಡೇವಿಡ್ ಇತ್ತೀಚೆಗೆ ಭಾಗಿಯಾಗಿದ್ದರು. ಸಖತ್ ಫನ್ ಆಗಿ ಮೂಡಿ ಬರುವ ಈ ಶೋನಲ್ಲಿ ಟಿಮ್ ಡೆವಿಡ್ ತಾವು ಹುಟ್ಟಿದ್ದು ಸಿಂಗಾಪುರದಲ್ಲಿ ಎಂದು ಹೇಳಿದ್ದಾರೆ. ಆಗ ಡ್ಯಾನೀಶ್ ಸೇಠ್, ನಾನು ಸಿಂಗಾಪುರ್ ನೋಡಿದ್ದು ಸಿಂಗಾಪುರ್ನಲ್ಲಿ ರಾಜ ಕುಳ್ಳ ಚಿತ್ರದಲ್ಲಿ ಎಂದು ಜೋಕ್ ಮಾಡಿದ್ದಾರೆ.ಅಲ್ಲದೇ ನೀವು ಈ ಸಿನಿಮಾ ನೋಡಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಟಿಮ್ ಡೇವಿಡ್ ನೋಡಿದ್ದೇನೆ. ಅದು ನನ್ನ ಫೇವರೇಟ್ ಸಿನಿಮಾ ಎಂದು ಹೇಳಿದ್ದಾರೆ.
ವಿ.ರಾಜೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಸಿಂಗಾಪುರ್ನಲ್ಲಿ ರಾಜ ಕುಳ್ಳ ಸಿನಿಮಾದಲ್ಲಿ ವಿಷ್ಣು-ದ್ವಾರಕೀಶ್ ನಟಿಸಿದ್ದಾರೆ. ವಿಷ್ಣು ದ್ವಾರಕೀಶ್ ನಟಿಸಿರುವ ಬಗ್ಗೆ ಟಿಮ್ ವಿವರಿಸಿದ್ದಾರೆ. ಬಳಿಕ ಈ ಚಿತ್ರದ ಕುಳ್ಳರ ರಾಜ ಹಾಡನ್ನು ಟಿಮ್ ಡೇವಿಡ್ ಹಾಡಿದ್ದಾರೆ. ನಿಜಕ್ಕೂ ಟಿಮ್ ಡೇವಿಡ್ ಸಿಂಗಾಪುರ್ನಲ್ಲಿ ರಾಜ ಕುಳ್ಳ ಚಿತ್ರ ನೋಡಿದ್ದಾರೋ ತಮಾಷೆಗೆ ಹೇಳಿದ್ದಾರೋ ಗೊತ್ತಿಲ್ಲ. ಟಿಮ್ ಡೇವಿಡ್ ಬಾಯಲ್ಲಿ ಕುಳ್ಳರ ರಾಜ ಹಾಡು ಕೇಳಿ ದಾದಾ ಫ್ಯಾನ್ಸ್ ಫಿದಾ ಆಗಿದ್ದಾರೆ.