ಬೆಂಗಳೂರು: ಪಹಲ್ಗಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬೆಂಬಲ ಸೂಚಿಸಲು ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನಡೆಸಿದ “ಜೈ ಹಿಂದ್ ತಿರಂಗಾ ಯಾತ್ರೆ”ಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಯಿತು.
ಕೆ ಆರ್ ಸರ್ಕಲ್ ನಿಂದ ಮಿನ್ಸ್ಕ್ ಚೌಕದವರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ತಿರಂಗಾ ಯಾತ್ರೆ ನಡೆಸಲಾಯಿತು. ಇದು ಪಕ್ಷಾತೀತ ಯಾತ್ರೆಯಾಗಿದ್ದರಿಂದ ಸರಕಾರಿ, ಖಾಸಗಿ ಉದ್ದಿಮೆಗಳ ನೌಕರರು, ಸಂಘ ಸಂಸ್ಥೆಗಳು, ವಿವಿಧ ಪಕ್ಷಗಳ ನಾಯಕರು ಸೇರಿದಂತೆ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿತ್ತು.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ಈ ಯಾತ್ರೆಯಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ, ತ್ರಿವರ್ಣ ಧ್ವಜ ಹಿಡಿದು ಭಾರತ ಹಾಗೂ ಸೈನಿಕರ ಪರ ಘೋಷಣೆಗಳನ್ನು ಕೂಗಿದರು. ಆ ಮೂಲಕ ದೇಶದ ಭದ್ರತೆ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನಾ ಪಡೆಗಳಿಗೆ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂಬ ಸಂದೇಶ ರವಾನಿಸಲಾಯಿತು.
ಯಾತ್ರೆ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ದೇಶದ ರಕ್ಷಣೆಗೆ ನಮ್ಮ ಯೋಧರು ಮಾಡುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕು. ನಮ್ಮ ಸೈನಿಕರು ನಮ್ಮ ಹೆಮ್ಮೆ” ಎಂದು ಹೇಳಿದರು.