ಕೋಲಾರ : ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿ ಹಿನ್ನಲೆ ಭಾರತೀಯ ಸೇನೆಗೆ ಗೌರವ ಸಲ್ಲಿಸಲು, ರಾಷ್ಟ್ರ ರಕ್ಷಣೆಗಾಗಿ ಬಿಜೆಪಿ ಹಾಗು ವಿವಿಧ ಸಂಘಟನೆ ಗಳು ಕೋಲಾರದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕೋಲಾರ ನಗರದ ನಚಿಕೇತನ ನಿಲಯ ಆವರಣದಲ್ಲಿ ತಿರಂಗಾ ಯಾತ್ರೆಗೆ ಚಾಲನೆ ನೀಡಿ 1500 ಅಡಿ ದ್ವಜವನ್ನು ಹಿಡಿದ ಮಾಜಿ ಸೈನಿಕರು ಹಾಗೂ ನೂರಾರು ವಿದ್ಯಾರ್ಥಿಗಳು,
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ತಿರಂಗಾ ಯಾತ್ರೆ ನಗರದ ಮೆಕ್ಕೆ ವೃತ್ತದ ಮೂಲಕ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಮೂಲಕ ಕ್ಲಾಕ್ ಟವರ್ ಪ್ರವೇಶಿಸಿ ಅಲ್ಲಿಂದ ಡೂಮ್ ಲೈಟ್ ವೃತ್ತದ ಮೂಲಕ ಮಕ್ಕಳ ಆಟದ ಮೈದಾನದಲ್ಲಿರುವ ಅಮರ್ ಜವಾನ್ ಸೈನಿಕ ಸ್ಮಾರಕ ದಲ್ಲಿ ಯುದ್ದದಲ್ಲಿ ಮಡಿದ ಸೈನಿಕರಿಗೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಗೌರವ ಸೂಚಿಸಲಾಯಿತು.
ಇನ್ನು ಒಂದೂವರೆ ಕಿ.ಲೋ ಮೀಟರ್ ಉದ್ಧದ ತಿರಂಗಾ ಹಿಡಿದು ದೇಶ ಪ್ರೇಮಿಗಳ ಕಾಲ್ನಡಿಗೆ ಜಾಥಾ ಮೂಲಕ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗಿ ಸೈನಿಕರಿಗೆ ಆತ್ಮ ಸ್ಥೈರ್ಯ ತುಂಬಿದರು.
ತಿರಂಗಾಯಾತ್ರೆ ಉದ್ದಕ್ಕೂ ನೆರದ ಸಾವಿರಾರು ದೇಶ ಭಕ್ತರು ದ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ದೇಶಪ್ರೇಮ ಮೆರೆದರು . ಬಿಜೆಪಿ ಜಿಲ್ಲಾದ್ಯಕ್ಷ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಂಸದ ಎಸ್ ಮುನಿಸ್ವಾಮಿ, ಮಾಜಿ ಶಾಸಕ ಮಂಜುನಾಥ್ ಗೌಡ, ಮಾಜಿ ಶಾಸಕ ವೈ ಸಂಪಂಗಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.