ದೊಡಬಳ್ಳಾಪುರ: ಟೈಯರ್ ಸ್ಫೋಟಗೊಂಡು ರಸ್ತೆಯ ತಡೆಗೋಡೆಗೆ ಸರ್ಕಾರಿ ಬಸ್ ಗುದ್ದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 30 ಜನರ ಪ್ರಾಣ ಉಳಿದಿದೆ. ದೊಡಬಳ್ಳಾಪುರದ ತಾಲೂಕಿನ ರಾಷ್ಟ್ರಿಯ ಹೆದ್ದಾರಿ 648 ರ ಮೆಣಸಿ ಗೇಟ್ ಬಳಿ ಈ ಘಟನೆ ನಡೆದಿದ್ದು,
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಸೂಲಿಕುಂಟೆಯಿಂದ ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿದ್ದ ವೇಳೆ ಅವಘಡ ಸಂಬಂಧವಿಸಿದ್ದು, ಬಸ್ ಚಾಲಕ ಮುನಿಶಾಮಪ್ಪನವರ ಸಮಯ ಪ್ರಜ್ಞೆಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.
ಬಸ್ಸಿನ ಟೈಯರ್ ಸವೆದಿರುವ ಕಾರಣ ಅವಘಡಕ್ಕೆ ಕಾರಣ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.