Close Menu
Ain Live News
    Facebook X (Twitter) Instagram YouTube
    Tuesday, May 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೆ ಪಪ್ಪಾಯಿ ಹಣ್ಣು ತಿನ್ನುಬಾರದಂತೆ!

    By AIN AuthorMay 26, 2025
    Share
    Facebook Twitter LinkedIn Pinterest Email
    Demo

    ಪಪ್ಪಾಯ ಅಂದರೆ ಪರಂಗಿ ಹಣ್ಣು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದು. ಅಲ್ಲದೇ ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದುವರಿದ ಬಾಣಂತಿಯರ ಸಾವು: ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವ ಬಲಿ

    ವರ್ಷ ಪೂರ್ತಿ ಸಿಗುವ ಹಣ್ಣುಗಳ ಪಟ್ಟಿಯಲ್ಲಿ ಪರಂಗಿ ಅಥವಾ ಪಪ್ಪಾಯಿ ಹಣ್ಣನ್ನು ಕೂಡ ಸೇರಿಸಬಹುದು! ಮಳೆಗಾಲವಿರಲಿ, ಚಳಿಗಾಲವಿರಲಿ ಅಥವಾ ಬೇಸಿಗೆಯಿರಲಿ, ಮಾರುಕಟ್ಟೆಯಲ್ಲಿ,ಈ ಹಣ್ಣು ಇದ್ದೇ ಇರುತ್ತದೆ. ಇನ್ನು ಹಳ್ಳಿ ಕಡೆಯೂ ಕೂಡ, ಸ್ವತಃ ಮನೆಯ ಬಳಿಯೇ, ಈ ಹಣ್ಣನ್ನು ಬೆಳೆಸುತ್ತಾರೆ. ಭೂಮಿಯ ಫಲವತ್ತತೆಯ ಆಧಾರದ ಮೇಲೆ ಹಣ್ಣಿನ ರುಚಿ ನಿಂತಿರುತ್ತದೆ.

    ಎಲ್ಲಾಕ್ಕಿಂತ ಪ್ರಮುಖವಾಗಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶ ವನ್ನು ಒಳಗೊಂಡ,ಈ ಹಣ್ಣು, ಅಷ್ಟೇ ಪ್ರಮಾಣದ ಆರೋಗ್ಯದ ಲಾಭಗಳನ್ನು ಕೂಡ ಒಳಗೊಂಡಿದೆ ಎಂದರೆ, ತಪ್ಪಾಗಲಾರದು.ಈಗ ವಿಷಯ ಏನೆಂದ್ರೆ ಪ್ರತಿಯೊಬ್ಬರೂ ಕೂಡ,ಈ ಹಣ್ಣನ್ನು ತಿನ್ನುವ ಹಾಗಿಲ್ಲ! ಕೇಳಲು ಅಚ್ಚರಿ ಅನಿಸುತ್ತದೆ ಅಲ್ಲವೇ?
    ಆದರೆ ಇದು ನಿಜ,ಈಗಾಗಲೇ ಕೆಲವೊಂದು ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿರುವವರು, ತಮ್ಮ ಆಹಾರ ಪದ್ಧತಿಯಲ್ಲಿ, ಯಾವುದೇ ಕಾರಣ ಕ್ಕೂ ಪರಂಗಿಹಣ್ಣನ್ನು ಅಥವಾ ಪರಂಗಿ ಕಾಯಿಯನ್ನು ಸೇರಿಸಿಕೊಳ್ಳ ಬಾರದು ಎಂದು ತಜ್ಞರು ಎಚ್ಚರಿಸು ತ್ತಾರೆ. ಹಾಗಾದರೆ ಯಾರವರು? ಈ ಹಣ್ಣಿನಿಂದ ಅವರು ಯಾಕೆ ದೂರ ಉಳಿಯಬೇಕು ಎಂದು ನೋಡೋಣ..

    ಗರ್ಭಿಣಿ ಮಹಿಳೆಯರು, ಪರಂಗಿ ಹಣ್ಣು ಅಥವಾ ಪರಂಗಿಕಾಯಿ ಯನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು ಎಂದು ಸ್ತ್ರೀರೋಗ ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ. ಯಾಕೆಂದ್ರೆ ಈ ಹಣ್ಣಿನಿಂದ ಗರ್ಭದಲ್ಲಿ ಬೆಳವಣಿಗೆ ಆಗುತ್ತಿರುವ ಭ್ರೂಣಕ್ಕೆ ಸಾಕಷ್ಟು ಮಾರಕ ಪ್ರಭಾವ ಎದುರಾಗಲಿದೆಯಂತೆ! ಅದರಲ್ಲೂ ಮುಖ್ಯವಾಗಿ, ಗರ್ಭಿಣಿ ಮಹಿಳೆಯರು ಯಾವುದೇ ಕಾರ ಣಕ್ಕೂ ಪರಂಗಿ ಕಾಯಿಯನ್ನು ತಿನ್ನಲು ಹೋಗಬಾರದು.
    ಇದಕ್ಕೆ ಮುಖ್ಯ ಕಾರಣ ಏನೆಂದ್ರೆ ಪರಂಗಿ ಕಾಯಿಯಲ್ಲಿ ಕಂಡು ಬರುವ ಒಂದು ರೀತಿಯ ಬಿಳಿ ಬಣ್ಣದ ಅಂಟು, ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಡೇಂಜರ್ ಎಂದು ಹೇಳಲಾಗುತ್ತದೆ.

    ಎಲ್ಲಾಕ್ಕಿಂತ ಹೆಚ್ಚಾಗಿ ಅವಧಿಗೆ ಮುನ್ನೇ ಹೆರಿಗೆಯಾಗುವ ಸಾಧ್ಯತೆ ಇರುತ್ತದೆಯಂತೆ, ಅಷ್ಟೇ ಅಲ್ಲದೆ, ಇನ್ನೂ ಕೆಲವು ಮಹಿಳೆಯರಿಗೆ, ಗರ್ಭಪಾತವಾಗುವ ಸಾಧ್ಯತೆ ಕೂಡ ಇರುತ್ತದೆಯಂತೆ! ಹೀಗಾಗಿ ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವ ಈ ಹಣ್ಣಿ ನಿಂದ ಗರ್ಭಿಣಿಯರು ದೂರವಿದ್ದರೆ ಒಳ್ಳೆಯದು.

    ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು, ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳಿಂದ ದೂರವಿರ ಬೇಕಂತೆ, ಇದಕ್ಕೆ ಪಪ್ಪಾಯಿ ಹಣ್ಣು ಕೂಡ ಹೊರ ತಲ್ಲ, ಈ ಹಣ್ಣಿನ ಲ್ಲಿಯೂ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿದೆ.
    ಇದಕ್ಕೆ ಕಾರಣ ಇಷ್ಟೇ,ತಜ್ಞರು ಹೇಳುವ ಪ್ರಕಾರ ಯಾವುದೇ ಬಗೆಯ ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳು, ಕಿಡ್ನಿಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ, ಇದರಿಂದ ಕಿಡ್ನಿಯಲ್ಲಿ ಈಗಾಗಲೇ ಸ್ಟೋನ್ ಸಮಸ್ಯೆ ಇರುವವರಿಗೆ, ಸಮಸ್ಯೆ ಮತ್ತಷ್ಟು ಉಲ್ಭಣವಾಗುವ ಸಾಧ್ಯತೆ ಇರುತ್ತದೆ.

    ಅನಿಯಮಿತ ಹೃದಯದ ಬಡಿತದ ಸಮಸ್ಯೆ ಇದ್ದವರು, ಈಗಾಗಲೇ ಅಧಿಕ ರಕ್ತದೊತ್ತಡಕ್ಕೆ ಮಾತ್ರೆ ತೆಗೆದು ಕೊಳ್ಳುತ್ತಿರುವವರು, ಹೃದಯದ ರಕ್ತ ನಾಳದ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಪಾರ್ಶ್ವವಾಯು ದಂತಹ ಸಮಸ್ಯೆ ಇರುವವರು, ಪರಂಗಿ ಅಥವಾ ಪಪ್ಪಾಯಿ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು.

    ಕಾಯಿಲೆಯಿಂದ ಬಳಲುತ್ತಿರುವವರು, ಪಪ್ಪಾಯಿ ಹಣ್ಣನ್ನು ತಿನ್ನಬೇಕೋ ಬೇಡವೋ? ಎನ್ನುವ ಗೊಂದಲವಿದೆ..ಯಾಕೆಂದ್ರೆ ಈ ಹಣ್ಣಿನಲ್ಲಿ ವಿಟಮಿನ್ನುಗಳು, ಆಕ್ಸಿಡೆಂಟುಗಳು, ನಾರಿನಾಂಶ ಗಳು, ನೈಸರ್ಗಿಕ ವಿರೇ ಚಕವಾಗಿ ಕಾರ್ಯನಿರ್ವಹಿಸಿ ಜೀರ್ಣಕ್ರಿಯೆ ಯನ್ನು ಸುಲಭ ಗೊಳಿಸುತ್ತವೆ.
    ಆದರೆ ಶುಗರ್ ಕಂಟ್ರೋಲ್‍ಗೆ ಸಿಗದಿದ್ದವರು, ಆದಷ್ಟು ಈ ಹಣ್ಣಿ ನಿಂದ ದೂರವಿದ್ದರೆ ಒಳ್ಳೆಯದು.ಯಾಕೆಂದ್ರೆ ಈ ಹಣ್ಣಿನಿಂದ ಕೂಡ ರಕ್ತದಲ್ಲಿ ಸಕ್ಕರೆಮಟ್ಟ ನಿಧಾನಕ್ಕೆ ಏರಿಕೆ ಆಗುವ ಸಾಧ್ಯತೆ ಇರುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ನಿತ್ಯವೂ ಚಿಯಾ ಬೀಜಗಳು ಮತ್ತು ನಿಂಬೆ ಜ್ಯೂಸ್ ಕುಡಿದರೆ ಏನಾಗುತ್ತೆ?

    May 27, 2025

    ನಿತ್ಯ ಬೆಳಗ್ಗೆ ಕಾಫಿ, ಚಹಾ ಕುಡಿಯೋ ಮುನ್ನ ಒಂದು ಗ್ಲಾಸ್ ನೀರು ಕುಡಿಯಿರಿ!

    May 27, 2025

    ಇಡ್ಲಿ- ದೋಸೆ ಹಿಟ್ಟು ಹುಳಿ ಆಗುವುದನ್ನು ತಡೆಯಲು ಈ ಟಿಪ್ಸ್ ಫಾಲೋ ಮಾಡಿ!

    May 26, 2025

    ಯಾವುದೇ ಕಾರಣಕ್ಕೂ ಮಾವಿನಹಣ್ಣು ತಿಂದ್ಮೇಲೆ ಈ ತಪ್ಪನ್ನು ಮಾತ್ರ ಮಾಡ್ಬೇಡಿ: ಹೀಗಾದ್ರೆ ಜೀವಕ್ಕೆ ಅಪಾಯ ಫಿಕ್ಸ್!

    May 26, 2025

    ಕ್ರಿಕೆಟ್​ಗೆ ವಿದಾಯ ಹೇಳಿದ ಮತ್ತೋರ್ವ ಸ್ಟಾರ್ ಪ್ಲೇಯರ್!

    May 26, 2025

    ದೇಶದಲ್ಲಿ 752 ಮಂದಿಗೆ ಕೋವಿಡ್ ಪಾಸಿಟಿವ್: ಈ ವೈರಸ್ ಹರಡುವುದನ್ನು ತಡೆಯೋದು ಹೇಗೆ..? ಇಲ್ಲಿದೆ ಮಾಹಿತಿ

    May 26, 2025

    ಕಿಡ್ನಿ ಡ್ಯಾಮೇಜ್’ನಿಂದ ಪಾರಾಗಬೇಕಾದ್ರೆ ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ..?

    May 26, 2025

    ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!

    May 25, 2025

    ತಿಳಿದಿರಲಿ: ಅಡಿಕೆಯಲ್ಲಿ ಅಡಗಿರುವ ಆರೋಗ್ಯಕರ ಅಂಶಗಳನ್ನು ತಿಳಿದುಕೊಳ್ಳಿ!

    May 25, 2025

    Karnataka Covid Guidelines: ಮತ್ತೆ ಬಂತು ಕೊರೊನಾ: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ – ಇಲ್ಲಿದೆ ಸಂಪೂರ್ಣ ಮಾಹಿತಿ

    May 24, 2025

    ಅಪ್ಪಿತಪ್ಪಿಯೂ ಇವುಗಳನ್ನು ಕುಕ್ಕರ್’ನಲ್ಲಿ ಬೇಯಿಸಬೇಡಿ..! ಇದು ಅನಾರೋಗ್ಯವನ್ನು ಖರೀದಿಸಿದಂತೆ..

    May 24, 2025

    ಪ್ರತಿನಿತ್ಯ ಬಾದಾಮಿ ತಿನ್ನುವುದರಿಂದ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಗೊತ್ತಾ!?

    May 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.