ಪುಸ್ತಕಗಳು ನಮ್ಮ ಬೆಸ್ಟ್ ಫ್ರೆಂಡ್ಸ್. ಅಷ್ಟೇ ಅಲ್ಲ ಒಳ್ಳೆಯ ಫಿಲಾಸಫರ್, ಮಾರ್ಗದರ್ಶಕ, ಒಳ್ಳೆಯ ಉದ್ದೇಶಗಳಿಗೆ ಗೈಡ್, ಉತ್ತಮ ಒಡನಾಡಿ ಸಹ. ಅದೆಷ್ಟೋ ಜನರಿಗೆ ಅವರ ಏಕಾಂಗಿತನ ಕಾಡದಂತೆ ಕಾಪಾಡುತ್ತಿರುವ ಒಡನಾಡಿ ಪುಸ್ತಕ. ಪುಸ್ತಕಗಳು ಪ್ರಮುಖ ಮಾಹಿತಿ ಮೂಲಗಳಾಗಿದ್ದು, ಜೊತೆಗೆ ಮನರಂಜನೆ ನೀಡುವ, ಮನಸ್ಸಿಗೆ ಶಾಂತಿ ನೀಡುವ ಸೋರ್ಸ್ ಸಹ.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಓದುವ ತುಡಿತಯಿರುವ ಅದೆಷ್ಟೋ ವ್ಯಕ್ತಿಗಳು ಇಂದಿಗೂ ನಮ್ಮ ಸುತ್ತಮುತ್ತಲಿನಲ್ಲಿ ಇದ್ದಾರೆ. ಆದರೆ ಓದುಗ ವರ್ಗವನ್ನು ಮತ್ತಷ್ಟು ಹೆಚ್ಚಿಸಲು ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನದ ಇತಿಹಾಸ:
ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಎನ್ನುವವರು ಈ ಪುಸ್ತಕ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ತಂದರು. ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಅವರ ಜನ್ಮದಿನವಾದ ಅಕ್ಟೋಬರ್ 7 ರಂದು ಪುಸ್ತಕ ದಿನವನ್ನಾಗಿ ಆಚರಿಸಲಾಯಿತು. ನಂತರದಲ್ಲಿ ಅವರು ಮರಣ ಹೊಂದಿದ ದಿನವಾದ ಏಪ್ರಿಲ್ 23 ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲಾಯಿತು. ಆದರೆ ಯುನೆಸ್ಕೊ ಏಪ್ರಿಲ್ 23 ಅನ್ನು ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನವನ್ನಾಗಿ ಆಚರಣೆ ಮಾಡಲು 1995 ರಲ್ಲಿ ಪ್ಯಾರಿಸ್ ಜೆನೆರಲ್ ಕಾನ್ಸರೆನ್ಸ್ ನಲ್ಲಿ ತೀರ್ಮಾನ ತೆಗೆದುಕೊಂಡಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನದ ಉದ್ದೇಶ:
ಇಂದಿನ ಯುವಕ ಯುವತಿಯರಲ್ಲಿ ಪುಸ್ತಕ ಓದಿಸುವುದನ್ನು ಹವ್ಯಾಸವನ್ನು ಬೆಳೆಸುವುದರೊಂದಿಗೆ ಪುಸ್ತಕ ಪ್ರಕಟಿಸುವ ಅಭಿರುಚಿ ಹೆಚ್ಚಿಸಲು ಮತ್ತು ಕೃತಿಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಸೇರಿದಂತೆ ವಿವಿಡೆದೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.