ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 22 ರಂದು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಹೆಚ್ಚಿನ ದೇಶಗಳಲ್ಲಿ ಪರಿಸರ ಪ್ರೇಮಿಗಳು ಮತ್ತು ಸ್ವಯಂ ಸೇವಕರು ಮರಗಳನ್ನು ನೆಡುತ್ತಾರೆ, ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ. ಮತ್ತು ಹವಾಮಾನದಲ್ಲಿನ ತೀವ್ರವಾದ ಬದಲಾವಣೆಯನ್ನು ತಡೆಗಟ್ಟಲು ಸರ್ಕಾರವು ಸರಿಯಾದ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.
ಭೂಮಿಯನ್ನು ವಿನಾಶದಿಂದ ಕಾಪಾಡಲು ಮತ್ತು ಭೂಮಿಯ ಮಹತ್ವವನ್ನು ತಿಳಿಸಲು ಈ ದಿನ ಹಲವಾರು ಕಾರ್ಯಕ್ರಮಗಳು ಪ್ರಪಂಚದಾದ್ಯಂತ ನಡೆಯುತ್ತವೆ. ಮತ್ತು ಭೂ ಗ್ರಹವನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು ಪ್ರತಿಯೊಂದು ರಾಷ್ಟ್ರದ ಕರ್ತವ್ಯವಾಗಿದೆ.
ನೀವು ಯಾವಾಗಲೂ ಯಂಗ್ ಆಗಿ ಕಾಣಿಸ್ಬೇಕಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಜಾಗ್ರತಗೊಳಿಸಲು ಪ್ರತಿವರ್ಷ ಏಪ್ರಿಲ್ 22ರಂದು ಭೂ ದಿನವನ್ನು ಆಚರಿಸಲಾಗುತ್ತದೆ. ಭೂಮಿಯನ್ನು ಸಹಜ ಸ್ಥಿತಿಗೆ ಮರಳಿಸುವುದು ಖಂಡಿತ ಮನುಷ್ಯನಿಂದಾಗ ಕೆಲಸ. ಆದರೆ, ಅದರ ಬಗ್ಗೆ ಪ್ರಯತ್ನವನ್ನಾದರೂ ಮಾಡಬಹುದು. ಇದೇ ವಿಶ್ವ ಭೂಮಿ ದಿನವನ್ನು ಆಚರಿಸುವ ಮುಖ್ಯ ಉದ್ದೇಶ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಮಾಲಿನ್ಯ ಮತ್ತು ಜೀವವೈವಿಧ್ಯತೆಯ ನಾಶ ಇವೆಲ್ಲವುಗಳ ತಡೆಗೆ ನಮ್ಮಿಂದಾದ ಕೊಡುಗೆ ನೀಡಬೇಕು. ಭೂಮಿಯ ಕೋಟ್ಯಂತರ ಜನ ಸೇರಿ ಮನಸ್ಸು ಮಾಡಿದರೆ ಸಾಧ್ಯವಾಗದೆ ಇರುವಂಥದ್ದು ಏನಿದೆ?
53 ವರ್ಷಗಳ ಮೊದಲು ವಿಶ್ವ ಭೂ ದಿನದ (World Earth Day) ಆಚರಣೆಗೆ ಶುಭಾರಂಭ ಮಾಡಲಾಯಿತು. ಅಮೆರಿಕದ ಸಿನೇಟರ್ ಜೆರಾಲ್ಡ್ ನೆಲ್ಸನ್ (Jerald Nelson) ಈ ದಿನಾಚರಣೆ ಹಿಂದಿನ ರೂವಾರಿ. ಶಾಲೆಗಳಿಗೆ ಪರೀಕ್ಷೆ ಇಲ್ಲದ ಈ ದಿನಗಳು ಅವರಿಗೆ ಭೂಮಿ ದಿನ ಆಚರಿಸಲು ಸರಿಯಾದ ಸಮಯ ಎಂದೆನಿಸಿತು. ಈ ದಿನದಂದು ಅಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಸಂಸ್ಥೆಗಳು ಒಗ್ಗೂಡಿ ಗಿಡ ನೆಡುವುದು, ಸ್ವಚ್ಛತೆ (Cleaning) ಕಾರ್ಯಕ್ರಮ ಮುಂತಾದವುಗಳನ್ನು ನಡೆಸುತ್ತಾರೆ. ಪರಿಸರಸ್ನೇಹಿ ಜೀವನಪದ್ಧತಿ (Lifestyle) ಅಳವಡಿಸಿಕೊಳ್ಳುವ ಕುರಿತು ಅರಿವು ಮೂಡಿಸಲಾಗುತ್ತದೆ. ಭಾರತದಲ್ಲೂ ಭೂಮಿ ದಿನದ ಅಂಗವಾಗಿ ಪ್ರತಿವರ್ಷ ಹಲವಾರು ಕಾರ್ಯಕ್ರಮಗಳನ್ನು (Program) ನಡೆಸಲಾಗುತ್ತದೆ.
ಕಳೆದ ಶತಮಾನ ಅತ್ಯಧಿಕ ಪ್ರಮಾಣದ ಕಾಡಿನ (Forest) ನಾಶಕ್ಕೆ ಸಾಕ್ಷಿಯಾಗಿದೆ. ಇಡೀ ವಿಶ್ವದಲ್ಲಿ ಅರಣ್ಯದ ಪ್ರಮಾಣ ಗಣನೀಯ ಕುಸಿತ ಕಂಡಿದೆ. ಜನರು ಮತ್ತು ಆಯಾ ಸ್ಥಳೀಯ ಸರ್ಕಾರಗಳು ಯಾವುದೇ ನಿಯಂತ್ರಣವಿಲ್ಲದೆ ಕಾಡನ್ನು ನಾಶಪಡಿಸಿದ ಪರಿಣಾಮವನ್ನು ನಾವೀಗ ಉಣ್ಣುತ್ತಿದ್ದೇವೆ. ಭಾರತದಲ್ಲಿ ಸ್ವಾತಂತ್ರ್ಯಾನಂತರ ಕೆಲವು ಕಾನೂನುಗಳನ್ನು (Acts) ಜಾರಿಗೊಳಿಸಲಾಗಿದೆಯಾದರೂ ಅಲ್ಲಿಯವರೆಗೆ ಹಾನಿಯಾದ ಪ್ರಮಾಣ ಅಪಾರ. ಆದರೆ, ನಿಯಮಾವಳಿ (Rules) ರೂಪುಗೊಂಡ ಕಾರಣದಿಂದ ಇಂದು ಮರ ಕಡಿದು (Cutting Tree) ಅದನ್ನು ಬಳಕೆ ಮಾಡಿಕೊಳ್ಳುವುದು ಸುಲಭವಲ್ಲ.