ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿಗೆ ಅವರ ಅಭಿಮಾನಿಗಳು ಇಂದು ಬೆಂಗಳೂರಿನಲ್ಲಿ ನಡೆಯುವ RCB ಪಂದ್ಯದಲ್ಲಿ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಇಂದು ಐಪಿಎಲ್ 2025 ಪುನರಾರಂಭವಾಗಲಿದ್ದು, ಆರ್ಸಿಬಿ vs ಕೆಕೆಆರ್ ನಡುವಣ ಪಂದ್ಯ ನಡೆಯಲಿದೆ. ಈ ಪಂದ್ದ ಸಂದರ್ಭದಲ್ಲಿ ಅಭಿಮಾನಿಗಳು ಕೊಹ್ಲಿಗೆ ವಿಶಿಷ್ಟ ಗೌರವ ನೀಡಲು ಯೋಜನೆ ರೂಪಿಸಿದ್ದಾರೆ.
ಈ ರಾಶಿಯವರ ಸಮಯ ಸರಿ ಇಲ್ಲ ಹೊಸತನದ ಕಾರ್ಯಕ್ಕೆ ಕೈ ಹಾಕಬೇಡಿ: ಶನಿವಾರದ ರಾಶಿ ಭವಿಷ್ಯ17 ಮೇ 2025
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಂಜೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ.
ವಿರಾಟ್ ಕೊಹ್ಲಿ ರನ್ ಹಸಿವು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದಾಗಲೇ ವೈಟ್ ಜೆರ್ಸಿ ಕ್ರಿಕೆಟ್ಗೆ ವಿದಾಯ ಹೇಳಿಬಿಟ್ಟಿದ್ದ ಕೊಹ್ಲಿಗೆ ಕೊನೆ ಪಕ್ಷ ಬಿಸಿಸಿಐ ವಿದಾಯದ ಪಂದ್ಯವಾಡಿಸಿ ಬೀಳ್ಕೊಡುಗೆ ನೀಡಬಹುದಿತ್ತು. ಆದ್ರೆ ಅದೂ ಆಗಲಿಲ್ಲ. ಹೀಗಾಗಿ ಆರ್ಸಿಬಿ ಫ್ಯಾನ್ಸ್ ಶನಿವಾರ ನಡೆಯುವ ಮ್ಯಾಚ್ಗೆ ನಂಬರ್ 18ರ ವೈಟ್ ಜೆರ್ಸಿ ಧರಿಸಿ ಕೊಹ್ಲಿಗೆ ಗೌರವ ನೀಡಲು ಸಿದ್ಧರಾಗಿದ್ದಾರೆ.
ಇಂಡಿಯಾ ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಕಿಂಗ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ನ ವಿದಾಯದ ಸುದ್ದಿ ಕೋಟ್ಯಾಂತರ ಅಭಿಮಾನಿಗಳಿಗೆ ಬರಸಿಡಿಲು ಬಂದಂತೆ ಎರಗಿತ್ತು. ಇನ್ನೂ ನಾಲ್ಕೈದು ವರ್ಷಗಳ ಕಾಲ ಕ್ರಿಕೆಟ್ ಆಡುವಷ್ಟು ಸಾಮರ್ಥ್ಯವಿದ್ದರೂ ವಿರಾಟ್ ದೃಢ ನಿರ್ಧಾರ ಮಾಡಿ ನಿವೃತ್ತಿ ಘೋಷಿಸಿದ್ದಾರೆ. 124 ಟೆಸ್ಟ್ ಮ್ಯಾಚ್ಗಳಲ್ಲಿ 9,230 ರನ್ ಹೊಡೆದಿದ್ದ ಕೊಹ್ಲಿಗೆ 770 ರನ್ ಗಳಿಸಿದರೆ 10000 ರನ್ಗಳ ಸರದಾರನಾಗುತ್ತಿದ್ದರು. ಆದರೆ ದಾಖಲೆಗೆ ತಲೆಕೆಡಿಸಕೊಳ್ಳದ ಕೊಹ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಬಿಸಿಸಿಐ ಆದರೂ ಒಂದು ಟೆಸ್ಟ್ ಮ್ಯಾಚ್ ಆಡುವಂತೆ ವಿನಂತಿ ಮಾಡಿ, ವಿದಾಯದ ಬೀಳ್ಕೊಡುಗೆ ಮಾಡಬಹುದಿತ್ತು ಅದನ್ನೂ ಮಾಡಲಿಲ್ಲ. ಇದೀಗ ಅಭಿಮಾನಿಗಳು, ಬಿಸಿಸಿಐ ಬೀಳ್ಕೊಡುಗೆ ಕೊಡಲಿಲ್ಲ ಅಂದರೆ ಏನಂತೆ ನಾವು ಕೊಡ್ತೀವಿ ಅಂತಾ ಸಜ್ಜಾಗಿದ್ದಾರೆ.