ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಾಳೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ.
ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವುದರಿಂದ ಈ ಪಂದ್ಯವು ಹೆಚ್ಚಿನ ಸ್ಕೋರಿಂಗ್ ಆಗುವ ನಿರೀಕ್ಷೆಯಿದೆ. ಒಂದೆಡೆ ಆರ್ಸಿಬಿ ಸತತ ಗೆಲುವುಗಳೊಂದಿಗೆ ಬರುತ್ತಿದ್ದರೆ, ಇತ್ತ ಲಕ್ನೋ ತಂಡ ಸೋಲಿನೊಂದಿಗೆ ಪಂದ್ಯಕ್ಕೆ ಕಾಲಿಡುತ್ತಿದೆ. ಈ ಪಂದ್ಯವನ್ನು ಆರ್ಸಿಬಿ ಗೆದ್ದರೆ ಅದು ಪ್ಲೇಆಫ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಇತ್ತ ಲಕ್ನೋ ಸೋತರೆ ಅದರ ಪ್ಲೇಆಫ್ ಕನಸು ಭಗ್ನವಾಗಲಿದೆ.
ಲಕ್ನೋ ಹಾಗೂ ಆರ್ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ಮೇ 9 ರಂದು ನಡೆಯಲಿದೆ.
ಲಕ್ನೋ ಹಾಗೂ ಆರ್ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ
ಲಕ್ನೋ ಹಾಗೂ ಆರ್ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯ ರಾತ್ರಿ 7:30 ಕ್ಕೆ ಆರಂಭವಾಗಲಿದೆ.
ಲಕ್ನೋ ಹಾಗೂ ಆರ್ಸಿಬಿ ನಡುವಿನ ಐಪಿಎಲ್ 59ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ನ ವಿವಿದ ಚಾನೆಲ್ಗಳಲ್ಲಿ ವೀಕ್ಷಿಸಬಹುದಾಗಿದೆ.