ಬೆಂಗಳೂರು:-ಈ ಬಾರಿಯ ಬಿಸಿಲು ಎಲ್ಲರನ್ನೂ ಹೈರಾಣಾಗಿಸಿತ್ತು. ಆದ್ರೆ ಮಳೆ ಬಂದು ಜನ ನಿಟ್ಟುಸುಸಿರು ಬಿಟ್ಟಿದ್ದಾರೆ. ಅದರಲ್ಲೂ ಬೆಂಗಳೂರಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಆದ್ರೆ ಭಾರೀ ಮಳೆಯಿಂದ ಬೆಸ್ಕಾಂಗೆ ಹೊಡೆತ ಬಿದ್ದಿದೆ. ಮಳೆಗಾಲ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟವಾಗಿದೆ.
RCBಗೆ ಸೋಲಿನ ಆಘಾತ ಕೊಟ್ಟ ಹೈದರಾಬಾದ್: 3ನೇ ಸ್ಥಾನಕ್ಕೆ ಜಾರಿದ ಬೆಂಗಳೂರು!
ಕಳೆದ ಕೆಲ ದಿನದಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ.
ಧಾರಾಕಾರ ಮಳೆಯಿಂದಾಗಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಬೆಸ್ಕಾಂಗೆ 3.54 ಕೋಟಿ ರೂ. ನಷ್ಟವಾಗಿದೆ. ಕೇವಲ ಮೇ ತಿಂಗಳಲ್ಲೇ 3.54 ಕೋಟಿ ರೂ. ಮೌಲ್ಯದ ಬೆಸ್ಕಾಂ ಉಪಕರಣಗಳು ಹಾಳಾಗಿ ನಷ್ಟವಾಗಿದೆ. 1,581 ವಿದ್ಯುತ್ ಕಂಬಗಳು, 229 ಟ್ರಾನ್ಸ್ಫಾರ್ಮರ್, 1.46 ಕಿ.ಮೀ ಉದ್ದದಷ್ಟು ವಿದ್ಯುತ್ ತಂತಿ, 46 ಡಬಲ್ ಪೋಲ್ ಸ್ಟ್ರಕ್ಚರ್‌ಗಳು ಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದ ಹಾಳಾಗಿವೆ.
ಇವುಗಳನ್ನು ಸರಿಪಡಿಸಲು 55 ಲಕ್ಷ ರೂ. ಕಾರ್ಮಿಕ ವೆಚ್ಚ ಸೇರಿ ಮಳೆ ಅವಾಂತರ ಸರಿಮಾಡಲು 4.09 ಕೋಟಿ ರೂ. ಬೆಸ್ಕಾಂಗೆ ಹೊರೆಯಾಗಿದೆ