ಹುಬ್ಬಳ್ಳಿ : ಅನ್ಯಕೋಮಿನ ಯುವಕನ ಟಾರ್ಚರ್ ನಿಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ಪ್ರಮೋದ್ ಮುತಾಲಿಕ್ ಯುವತಿ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ.
ಹುಬ್ಬಳ್ಳಿ ಕಿಮ್ಸ್ ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಯುವತಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿ ಯುವಕನಿಂದ ನಿರಂತರ ಟಾರ್ಚರ್: ಆತ್ಮಹತ್ಯೆಗೆ ಯತ್ನಿಸಿದ ಯುವತಿ!
ಕಳೆದ ಎರಡು ದಿನಗಳ ಹಿಂದೆ ಅನ್ಯಕೋಮಿನ ಯುವಕ ಸಿರಾಜ್ ನಿಂದ ಯುವತಿಗೆ ಟಾರ್ಚರ್ ನೀಡಲಾಗಿತ್ತುಧಾರವಾಡ ಜಿಲ್ಲೆಯ ಕುಂದಗೋಳ ನಿವಾಸಿ ವಿದ್ಯಾಗೆ ಆಕೆಯ ಫೋಟೋ ಇಟ್ಕೊಂಡು ಟಾರ್ಚರ್ ನೀಡಲಾಗಿತ್ತು. ಇದರಿಂದ ಮನನೊಂದು ವಿದ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಳು. ಟ್ಯಾಬ್ಲೆಟ್ ತಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾ ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.