ಬೆಂಗಳೂರು: ಕೇಂದ್ರ ಕೈಗೊಂಡ ಕಠಿಣ ನಿರ್ಣಯಗಳು ಪಾಕಿಸ್ತಾನದ ದುಗುಡ ಹೆಚ್ಚಿಸಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಉಗ್ರರ ಗುಂಡೇಟಿಗೆ ಬಲಿಯಾದ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ಮೃತದೇಹದ ಅಂತಿಮ ದರ್ಶನ ಪಡೆದರು. ನಂತರ ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ನಮ್ಮವರು ದಾಳಿ ಮಾಡಬಹುದು. ದೇಶದ ಜನರ ಆಕ್ರೋಶ ಅರ್ಥ ಮಾಡಿಕೊಂಡು ಕೇಂದ್ರ ಕಠಿಣ ಕ್ರಮಕ್ಕೆ ಮುಂದಾಗುವುದಂತೂ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫ್ರಿಡ್ಜ್ ನಲ್ಲಿ ಈ ಹಣ್ಣುಗಳನ್ನು ಇಡ್ತಿದ್ದೀರಾ!? ಇದರಿಂದ ದೇಹಕ್ಕಾಗುವ ಹಾನಿ ಎಷ್ಟು ಗೊತ್ತಾ!?
ಎಂಥಾ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗುತ್ತದೆ ಅಂದರೆ ಮತ್ತೊಮ್ಮೆ ಪಾಕಿಸ್ತಾನ ನಮ್ಮ ದೇಶದ ಮೇಲೆ ಉಗ್ರ ಚಟುವಟಿಕೆ ನಡೆಸಲು ಹೆದರಬೇಕು. ಬುಧವಾರ ಕೇಂದ್ರ ಕೈಗೊಂಡ ಕಠಿಣ ನಿರ್ಣಯಗಳು ಪಾಕಿಸ್ತಾನದ ದುಗುಡ ಹೆಚ್ಚಿಸಿದೆ. ಮುಂದೆಯೂ ಪಾಕಿಸ್ತಾನದ ಮೇಲೆ ದಾಳಿ ನಡೆಯುವ ವಿಶ್ವಾಸ ನನಗೆ ಇದೆ ಎಂದು ಹೇಳಿದರು.
ಇಂದು ಸರ್ವಪಕ್ಷ ಸಭೆ ನಡೆಯಲಿದೆ. ಎಲ್ಲಾ ಪಕ್ಷಗಳೂ ಕಠಿಣ ನಡೆಗೆ ಒತ್ತಾಯಿಸುವ ಸಾಧ್ಯತೆ ಇದೆ. ಭಾರತವೂ ಪಾಕಿಸ್ತಾನದ ವಿಚಾರದಲ್ಲಿ ಕಠಿಣ ಹೆಜ್ಜೆ ಇಡಲಿದೆ. ಭಾರತ ಸರ್ಕಾರ ಈ ದುರ್ಘಟನೆಯ ಪ್ರತೀಕಾರ ತೆಗೆದುಕೊಳ್ಳಲಿದೆ. ಕರ್ನಾಟಕದ ಪ್ರವಾಸಿಗರು ರಕ್ಷಣೆ ಮಾಡಿ ಕಾಶ್ಮೀರದಿಂದ ರಾಜ್ಯ ಸರ್ಕಾರ ವಾಪಸ್ ಕರೆತರುತ್ತಿದೆ. ಸರ್ಕಾರದ ಈ ನಡೆ ಶ್ಲಾಘನೀಯ ಎಂದರು.