ಬಳ್ಳಾರಿ:: ನಡುರಸ್ತೆಯಲ್ಲೇ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, 8 ಮಂದಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ನಾಗಲಾಪುರ ಗ್ರಾಮದ ಬಳಿ ಜರುಗಿದೆ.
ಜ್ಯೋತಿಲಾಲ್ ತುಡು (35) ಸಾವನ್ನಪ್ಪಿರುವ ಕಾರ್ಮಿಕ. ವಿಂಡ್ ಫ್ಯಾನ್ ಕೆಲಸಕ್ಕೆಂದು ಬಂದಿದ್ದ ಬಿಹಾರ ಹಾಗೂ ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕರು ಟ್ರಾಕ್ಟರ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಘಟನೆಯಲ್ಲಿ ಮೂರ್ನಾಲ್ಕು ಜನರಿಗೆ ಕೈ, ಕಾಲು ಮುರಿದಿದ್ದು, ಗಂಭೀರ ಗಾಯಗಳಾಗಿವೆ. ಉಳಿದಂತೆ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಕೂಡ್ಲಿಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗ್ತಿದೆ.