ರಾಯಚೂರು:- ಇಂದು ಮುಸ್ಲಿಂ ಮುಖಂಡರ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹೊತ್ತಲ್ಲೇ ದುರಂತ ಒಂದು ಸಂಭವಿಸಿದೆ. ಮೊಹರಂ ಆಚರಣೆ ವೇಳೆ ಬೆಂಕಿಗೆ ಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಲಿಂಗಸುಗೂರು ತಾಲೂಕಿನ ಯರಗುಂಟಿಯಲ್ಲಿ ಜರುಗಿದೆ.
ವಾಹನ ಸವಾರರ ಗಮನಕ್ಕೆ: ಇಂದು ಬೆಂಗಳೂರಿನ ಈ 3 ಮಾರ್ಗದಲ್ಲಿ ವಾಹನ ಸಂಚಾರ ಬದಲಾವಣೆ!
ಗಾಯಗೊಂಡ ವ್ಯಕ್ತಿಯನ್ನು ಹನುಮಂತ ಎಂದು ಗುರುತಿಸಲಾಗಿದೆ. ಹಬ್ಬದ ಸಡಗರದಲ್ಲಿದ್ದಾಗ ಅವರು ಹಲಾಯಿ ಕುಣಿಗೆ ಆಯತಪ್ಪಿ ಬಿದ್ದಿದ್ದಾರೆ. ಗಂಭೀರ ಗಾಯಗಳಾಗಿದ್ದು, ಅವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಗಾಯಾಳುವನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.