ಮಂಡ್ಯ:- ಜಿಲ್ಲೆಯ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಕಬಡ್ಡಿ ಆಟ ನೋಡಲು ಹೋದ 50 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ : NIA ಹೆಗಲಿಗೆ ತನಿಖೆ ಹೊಣೆ – ಕೇಂದ್ರ!
ಸಾವಿರಾರು ಜನರು ಕಬಡ್ಡಿ ಆಟವನ್ನ ನೋಡಲು ಸೇರಿದ್ರು. ಹೀಗೆ ಪಂದ್ಯ ವೀಕ್ಷಣೆ ಮಾಡುವ ವೇಳೆ ಪ್ರೇಕ್ಷಕರ ಗ್ಯಾಲರಿ ದಿಢೀರ್ ಕುಸಿದು ಬಿಟ್ಟಿದೆ. ಪರಿಣಾಮ ಗ್ಯಾಲರಿಯಲ್ಲಿ ಇದ್ದ ಜನರೆಲ್ಲಾ ದಪ್ ಅಂತ ಕೆಳಗಡೆ ಬಿದ್ದಿದ್ದಾರೆ.
ಪರಿಣಾಮ ಕಬಡ್ಡಿ ಪಂದ್ಯ ವೀಕ್ಷಿಸಲು ಬಂದಿದ್ದ 50 ವರ್ಷದ ಪಾಪಣ್ಣಚಾರಿ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನ ಸಂಬಂಧಿಕರು ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಗ್ಯಾಲರಿ ಕುಸಿದ ಘಟನೆಯಲ್ಲಿ 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನ ತಕ್ಷಣವೇ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಸದ್ಯ 13 ಜನರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದಿದೆ.