ಬೆಂಗಳೂರು:- ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ. ಅಲ್ಲದೇ ಮೆಟ್ರೋ ರೈಲಿಗೆ ನಿತ್ಯ ಅವಲಂಬಿತರಾಗಿರುವವರು ಈ ಸುದ್ದಿ ನೋಡಲೇಬೇಕಾಗಿದೆ.
ನಮ್ಮ ಮೆಟ್ರೋದಲ್ಲಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ನಮ್ಮ ಮೆಟ್ರೋ ಆಗಾಗ ಜನರ ಅನುಕೂಲತೆಗೆ ತಕ್ಕಂತೆ ಹೆಚ್ಚುವರಿ ಸಮಯ ಕಾರ್ಯ ನಿರ್ವಹಿಸುತ್ತದೆ. ಇದೀಗ, ಭಾನುವಾರ ರಂದು ನಮ್ಮ ಮೆಟ್ರೋ ಬೆಳಗ್ಗೆ 6 ಗಂಟೆ ಬದಲಾಗಿ ನಸುಕಿನ ಜಾವ 3:30ಕ್ಕೆ ಆರಂಭವಾಗಲುದೆ. ಟಿಸಿಎಸ್ ವರ್ಲ್ಡ್ 10ಕೆ-2025 ಮ್ಯಾರಥಾನ್ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮೆಟ್ರೋ ಸಮಯ ವಿಸ್ತರಣೆ ಮಾಡಿದೆ.
ಟಿಸಿಎಸ್ ವರ್ಲ್ಡ್ 10ಕೆ-2025 ಮ್ಯಾರಥಾನ್ನ 17ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ, ಬಿಎಂಆರ್ಸಿಎಲ್ ಏಪ್ರಿಲ್ 27 ರ ಭಾನುವಾರ ಬೆಳಿಗ್ಗೆ, 3:30ಕ್ಕೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿದೆ. ಇದು ಸಾಮಾನ್ಯ ಸಮಯಕ್ಕಿಂತ ಮೂರುವರೆ ಗಂಟೆಗಳ ಮುಂಚೆಯೇ ಪ್ರಾರಂಭವಾಗುತದೆ. ಈ ವಿಸ್ತ್ರತ ಅವಧಿಯಲ್ಲಿ ನಾಲ್ಕು ಮೆಟ್ರೋ ಟರ್ಮಿನಲ್ ಗಳು ಮತ್ತು ನಾಡಪ್ರಭು ಕೆಂಪೇಗೌಡ ನಿಲ್ಯಾಣ ಮೆಜೆಸ್ಟಿಕ್ ನಿಲ್ಯಾಣದಿಂದ ರೈಲುಗಳು 12 ನಿಮಿಷಗಳ ಅಂತರದಲ್ಲಿ ಚಲಿಸುತ್ತವೆ
ಇದೊಂದು ಸುಗಮ ಸಾರಿಗೆಯಾಗಿದ್ದು ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ವರ್ಲ್ಡ್ಸ್ ಪ್ರೀಮಿಯರ್ 10K ಓಟದಲ್ಲಿ ಭಾಗವಹಿಸಲು ಮೇಲಿನ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಬಿಎಂಆರ್ ಸಿಎಲ್ ವಿನಂತಿಸಿದೆ.