ಹುಬ್ಬಳ್ಳಿ : ನೇಹಾ ಹಿರೇಮಠ ಹತ್ಯೆ ಪ್ರಕರಣದ ಟ್ರಯಲ್ ಇಂದಿನಿಂದ ಆರಂಭವಾಗಲಿದೆ. ಹತ್ಯೆ ನಡೆದು ಒಂದು ವರ್ಷ ಹತ್ತು ದಿನಗಳ ಬಳಿಕ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿದೆ.
ಇಂದಿನಿಂದ ಒಂದು ತಿಂಗಳೊಳಗೆ ಅಂತಿಮ ತೀರ್ಪು ಘೋಷಣೆಯಾಗುವ ಸಾಧ್ಯತೆ ಇದೆ. ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಪರಮೇಶ್ವರ ಪ್ರಸನ್ನ ಅವರು ವಿಚಾರಣೆ ನಡೆಸಲಿದ್ದಾರೆ.
ವಿಶೇಷ ಪ್ರಕರಣದಂತೆ ಪರಿಗಣಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮಾದರಿಯಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಸಿಐಡಿ ಹಾಗೂ ನೇಹಾ ಹಿರೇಮಠ ಪರವಾಗಿ ಹಿರಿಯ ಅನುಭವಿ ವಕೀಲ ಮಹೇಶ್ ವೈದ್ಯರಿಂದ ವಾದ ಮಂಡಿಸಲಿದ್ದಾರೆ.
ನೇಹಾ ಹತ್ಯೆ ಸಾಮಾಜಿಕ ಆರೋಪ, ನೇಹಾ ಹತ್ಯೆ ಮಾದರಿಯಾಗಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ಅಂಜಲಿ ಹತ್ಯೆ ಆಗಿದೆ. ಹೀಗಾಗಿ ಆರೋಪಿಗೆ ಮರಣದಂಡನೆಗೆ ಒತ್ತಾಯಿಸಿ ವಾದ ಮಂಡನೆ ಸಾಧ್ಯತೆ ಇದೆ. 80 ಕ್ಕೂ ಅಧಿಕ ಸಾಕ್ಷಿಗಳು
ವಿಚಾರಣೆ ನಡೆಯಲಿದೆ. ಮತ್ತೊಂದು ಕಡೆ ಆರೋಪಿ ಪರ ಕಾನೂನು ಸೇವಾ ಸಮಿತಿಯಿಂದ ನೇಮಕವಾದ ವಕೀಲರಿಂದ ವಾದ ಮಂಡನೆಯಾಗಲಿದೆ.
ಆಟೋದಲ್ಲಿ ತೆರಳ್ತಿದ್ದ ಯುವತಿಯರಿಬ್ಬರಿಗೆ ಚುಡಾಯಿಸಿ ಕಿರುಕುಳ: ಇಬ್ಬರು ಅರೆಸ್ಟ್
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ಹತ್ಯೆ ಪ್ರಕರಣ ಇಡೀ ದೇಶದಲ್ಲಿಯೇ ಸುದ್ದಿಯಾಗಿತ್ತು. ಮಾಜಿ ಸಹಪಾಠಿ ಫೈಯಾಜ್ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ನೇಹಾ ಹಿರೇಮಠ ಹತ್ಯೆ ಮಾಡಿದ್ದ. 2024 ರ ಏಪ್ರಿಲ್ 18ರಂದು ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಲ್ಲಿ ಹಾಡು ಹಗಲೇ ಸುಮಾರು 27 ಬಾರಿ ಚಾಕು ಇರಿದು ನೇಹಾ ಹತ್ಯೆ ಮಾಡಲಾಗಿತ್ತು.